ಮನೋರಂಜನೆ

ಟ್ವಿಟ್ಟರ್ ನಲ್ಲಿ ಮೋದಿ-ಶಾರುಖ್ ಮಧ್ಯೆ ತೀವ್ರ ಪೈಪೋಟಿ !

Pinterest LinkedIn Tumblr

 Modi-sharukh

ನವದೆಹಲಿ: ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅನುಯಾಯಿಗಳ ಸಂಖ್ಯೆ 16 ದಶಲಕ್ಷ ದಾಟಿದೆ. ಕಳೆದ ಒಂದು ವರ್ಷದಿಂದೀಚೆಗೆ ಅವರ ಅನುಯಾಯಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆಯಂತೆ.

ಕೇವಲ ಎರಡು ತಿಂಗಳಲ್ಲಿ ಮೋದಿಯವರ ಟ್ವಿಟ್ಟರ್ ಅಕೌಂಟ್ @narendramodiಗೆ ಹತ್ತುಲಕ್ಷ ಮಂದಿ ಸೇರಿದ್ದಾರೆ. ಮೊನ್ನೆ ಸೆಪ್ಟೆಂಬರ್ 22ಕ್ಕೆ ಮೋದಿಯವರನ್ನು ಇಷ್ಟಪಡುವ ಜನರ ಸಂಖ್ಯೆ 15 ದಶಲಕ್ಷ ದಾಟಿತ್ತು. 2014 ಮೇ 26ರಂದು ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ 11.9 ದಶಲಕ್ಷ ಮಂದಿ ಸೇರ್ಪಡೆಗೊಂಡರು. ಟ್ವಿಟ್ಟರ್ ಖಾತೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿದ ಜನನಾಯಕ ಅಗ್ಗಳಿಕೆ ಅವರದ್ದು.

ಇಂದು ಟ್ವಿಟ್ಟರ್ ಖಾತೆಯಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಒಳಗೊಂಡಿರುವ ಭಾರತೀಯರಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ @SrBachchan ಅಕೌಂಟ್ ನಲ್ಲಿ 17.8 ದಶಲಕ್ಷ ಅನುಯಾಯಿಗಳಿದ್ದಾರೆ. ಶಾರೂಕ್ ಖಾನ್ ಅವರ @iamsrk ಖಾತೆಯಲ್ಲಿ 16.2 ದಶಲಕ್ಷ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು 2009ರಿಂದೀಚೆಗೆ ಟ್ವಿ ಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿದ ಭಾರತೀಯ ರಾಜನಾಯಕರಾಗಿದ್ದು, ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ @barackobama ಖಾತೆಯಿದೆ. ಅವರಿಗೆ 66.1 ದಶಲಕ್ಷ ಅನುಯಾಯಿಗಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ವಿಟ್ಟರ್ ತಾಣ, ಭಾರತದ ಪ್ರಧಾನ ಮಂತ್ರಿ ಹಾಗೂ ಬಾಲಿವುಡ್ ಬಾದ್ ಷಾ ಶಾರೂಕ್ ಖಾನ್ ಮಧ್ಯೆ ಪೈಪೋಟಿ ಇದೆ. ಈ ವರ್ಷಾಂತ್ಯಕ್ಕೆ ಯಾರು ಗೆಲ್ಲುತ್ತಾರೆ? ಎಂದು ಹಾಕಿಕೊಂಡಿದೆ.

Write A Comment