ಕರ್ನಾಟಕ

‘ರಸ್ತೆ ಗುಂಡಿ ಮುಚ್ಚಲು ತಾತ್ಕಾಲಿಕ ಕ್ರಮ’: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಆಯುಕ್ತ ಜಿ.ಕುಮಾರ ನಾಯಕ

Pinterest LinkedIn Tumblr

gundi-fi

ಬೆಂಗಳೂರು, ನ. 17: ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ‘ವೈಟ್ ಮಿಕ್ಸ್ ಮತ್ತು ಕ್ವಾರಿ ಡಸ್ಟ್’ ಬಳಸಿ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಆಯುಕ್ತ ಜಿ.ಕುಮಾರ ನಾಯಕ ತಿಳಿಸಿದ್ದಾರೆ.

ನಗರದಲ್ಲಿ ಹದಿನೈದು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯ ಹಿನ್ನೆಲೆಯಲ್ಲಿ ರಸ್ತೆಗಳು ಹದಗೆಟ್ಟಿದ್ದು, ನವೆಂಬರ್‌ನಲ್ಲಿ 230 ಮಿ.ಮೀ.ಗಿಂತ ಹೆಚ್ಚು ಮಳೆಯಾದ ಕಾರಣ ಗುಂಡಿಗಳು ಮತ್ತಷ್ಟು ಹೆಚ್ಚಾಗಿವೆ. ಹೀಗಾಗಿ ಮಳೆ ನಿಂತ ಬಳಿಕ ಹಾಟ್ ಮಿಕ್ಸ್ ಬಳಸಿ ಶಾಶ್ವತವಾಗಿ ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಮಳೆಯಿಂದಾಗಿ ಸದಾ ತೇವಾಂಶವಿದು,್ದ ರಸ್ತೆ ಗುಂಡಿ ಮುಚ್ಚಲು ಹಾಟ್‌ಮಿಕ್ಸ್ ಬಳಸಿ ಗುಂಡಿ ಮುಚ್ಚಲು ಸಾಧ್ಯವಿಲ್ಲ. ಆದರೆ, ಸುಗಮ ಸಂಚಾರದ ದೃಷ್ಟಿಯಿಂದ ‘ವೈಟ್ ಮಿಕ್ಸ್ ಮತ್ತು ಕ್ವಾರಿ ಡಸ್ಟ್’ ಬಳಸಿ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಸ್ತೆ ದುರಸ್ತಿಗೆ ‘ಜಲಮಂಡಳಿ ಅಧಿಕಾರಿಗಳಿಗೆ’ ಮೇಯರ್ ಸೂಚನೆ ಬೆಂಗಳೂರು, ನ. 17: ಜಲಮಂಡಳಿಯಿಂದ ಅಗೆಯಲಾದ ಎಲ್ಲ ರಸ್ತೆಗಳ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ ಬೆಂಗಳೂರು ಜಲಮಂಡಳಿ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಮಂಗಳವಾರ ಮಹದೇವಪುರ ವಲಯದ ಪ್ರಮುಖ ರಸ್ತೆಗಳಾದ ಹೂಡಿ, ಐಟಿಪಿಎಲ್ ಮುಖ್ಯರಸ್ತೆ, ಕುಂದಲಹಳ್ಳಿ, ದೊಡ್ಡನೆಕ್ಕುಂದಿ, ಗ್ರಾಫೈಟ್ ಇಂಡಿಯಾ ಮುಖ್ಯರಸ್ತೆಗಳಲ್ಲಿ ನೀರು ಮತ್ತು ಒಳಚರಂಡಿ ಪೈಪ್‌ಗಳನ್ನು ಅಳವಡಿಸಲು ಜಲ ಮಂಡಳಿಯಿಂದ ರಸ್ತೆಗಳನ್ನು ಅಗೆದು ಅವುಗಳನ್ನು ಸರಿಯಾಗಿ ಮುಚ್ಚದ ಹಾಗೆ ಬಿಟ್ಟಿದ್ದಾರೆ.

ಇದನ್ನು ಗಮನಿಸಿದ ಮಂಜುನಾಥ ರೆಡ್ಡಿ ಜಲಮಂಡಳಿ ವಿರುದ್ಧ ಕಿಡಿಕಾರಿದರು. ಅಲ್ಲದೆ, ವಲಯದ ಕಾರ್ಯಪಾಲಕ ಎಂಜಿನಿಯರಿಂಗ್ ಮಾಹಿತಿ ಪಡೆದುಕೊಂಡ ಅವರು, ಜಲಮಂಡಳಿಯಿಂದ ವಲಯದಲ್ಲಿ 65 ಕಿ.ಮೀ. ರಸ್ತೆ ಅಗೆದಿದ್ದು, ಆ ರಸ್ತೆ ಅಗೆದು ಆರು ತಿಂಗಳಾದರೂ ದುರಸ್ತಿ ಕಾರ್ಯಕೈಗೊಂಡಿರುವುದಿಲ್ಲ. ಇದರಿಂದ ಸಾರ್ವಜನಿಕ ತೊಂದರೆ ಆಗುತ್ತಿರುವುದನ್ನು ಖುದ್ದು ಗಮನಿಸಿದರು. ಅಗೆದ ಎಲ್ಲ ರಸ್ತೆಗಳನ್ನು ಜಲಮಂಡಳಿಯ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿ, ಕೂಡಲೇ ಜಲಮಂಡಳಿಯಿಂದ ರಸ್ತೆ ದುರಸ್ತಿ ಕಾರ್ಯಕೈಗೊಳ್ಳಬೇಕು. ಇಲ್ಲವಾದಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ತಗಲುವ ವೆಚ್ಚವನ್ನು ಪಾಲಿಕೆಗೆ ಭರಿಸಬೇಕು ಎಂದು ಅವರು ಎಚ್ಚರಿಕೆ ನೀಡಿದರು.

Write A Comment