ಕರ್ನಾಟಕ

ಹಾಡಹಗಲೇ ದನಗಾಹಿ ಶಿವಣ್ಣನ ಹೊತ್ತೊಯ್ದ ಹುಲಿ; ಪೊದೆ ಬಳಿ ಶವ ಪತ್ತೆ

Pinterest LinkedIn Tumblr

Tigerಮೈಸೂರು: ಹಾಡಹಗಲೇ ದನಗಾಹಿಯೊಬ್ಬರನ್ನು ಹುಲಿಯೊಂದು ಹೊತ್ತೊಯ್ದಿರುವ ಘಟನೆ ಮೈಸೂರಿನ ಎಚ್ ಡಿ ಕೋಟೆಯ ಹಾದನೂರು ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಇಂದು ಬೆಳಗ್ಗೆ ದನಗಾಹಿ ಶಿವಣ್ಣ(50) ಎಂಬವರು ದನ ಮೇಯಿಸಲು ಹೋದ ಸಂದರ್ಭದಲ್ಲಿ ಹುಲಿ ಅವರನ್ನು ಹೊತ್ತೊಯ್ದಿದ್ದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಶಿವಣ್ಣನನ್ನು ರಕ್ಷಿಸಲು ಗ್ರಾಮಸ್ಥರು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.

ಹಾದನೂರು ಪೊದೆ ಬಳಿ ಶಿವಣ್ಣನ ಶವ ಪತ್ತೆ:
ಹುಲಿ ಹೊತ್ತೊಯ್ದಿದ್ದ ಶಿವಣ್ಣನ(50ವರ್ಷ) ಶವ ಹಾದನೂರು ಪೊದೆ ಬಳಿ ಪತ್ತೆಯಾಗಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಶಿವಣ್ಣನನ್ನು ಹುಲಿ ಕೊಂದಿರುವುದಾಗಿ ಹೇಳಿದ್ದಾರೆ.
-ಉದಯವಾಣಿ

Write A Comment