ಕರ್ನಾಟಕ

ಬಿಗ್ ಬಾಸ್ ಮನೆಗೆ ಹುಚ್ಚ ವೆಂಕಟ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ‘ಹುಚ್ಚ’ ಹುಡುಗರ ಪಟ್ಟು…ಮುಂದೆ ಏನು ಮಾಡುತ್ತಾರೆ ?

Pinterest LinkedIn Tumblr

huccha

ಅಚ್ಚರಿಯ ಬೆಳವಣಿಗೆ ಯಲ್ಲಿ, ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಹುಚ್ಚ ವೆಂಕಟ್ ರವರನ್ನು ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಕರೆಸಿಕೊಳ್ಳುವಂತೆ ‘ ಹುಚ್ಚ’ ಹುಡುಗರು ಪಟ್ಟು ಹಿಡಿದಿದ್ದಾರೆ. ಹುಚ್ಚ ವೆಂಕಟ್ ತನ್ನ ಇನ್ನೊಬ್ಬ ಪ್ರತಿಸ್ಪರ್ಧಿ ರವಿ ಮೂರೂರು ಮೇಲೆ ಹಲ್ಲೆ ನಡೆಸಿದ್ದಕ್ಕೆ ಬಿಗ್ ಬಾಸ್ ಹೌಸ್‍ನಿಂದ ಔಟ್ ಆಗಿದ್ದಾರೆ. ಇತ್ತ ಹುಚ್ಚ ವೆಂಕಟ್ ಅಭಿಮಾನಿಗಳು ವೆಂಕಟ್ ರ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ವೆಂಕಟ್ ಅವರಿಂದಲೇ ಬಿಗ್ ಬಾಸ್ ಷೋ ವನ್ನು ಹೆಚ್ಚು ಜನ ವೀಕ್ಷಿಸುತ್ತಿದ್ದು, ಅವರ ಸಣ್ಣ ತಪ್ಪನ್ನು ಮನ್ನಿಸಿ ಅವರನ್ನು ಮತ್ತೆ ಬಿಗ್ ಬಾಸ್ ಮನೆಗೆ ಸೇರಿಸಿಕೊಳ್ಳಬೇಕೆಂದು ಪ್ರತಿಭಟನೆ ನಡೆಸಿದ್ದಾರೆ.

ನಿನ್ನೆ ನಡೆದ ಘಟನೆಯಲ್ಲಿ ಹುಚ್ಚ ವೆಂಕಟ್ ಅವರದು ಯಾವುದೇ ತಪ್ಪಿಲ್ಲ, ಮತ್ತೊಬ್ಬ ಸ್ಪರ್ಧಿ ಅವರನ್ನು ಕಿಚಾಯಿಸಿದ್ದರಿಂದ ಸಿಟ್ಟಿಗೆದ್ದು ಹೀಗೆ ವರ್ತಿಸಿದ್ದಾರೆ. ಅವರ ತಪ್ಪಿಗೆ ಮನೆಯಲ್ಲೇ ಶಿಕ್ಷೆ ಕೊಡಬಹುದಾಗಿತ್ತು, ಮನೆಯಿಂದ ಹೊರ ಕಲಿಸುವ ಅವಶ್ಯಕತೆ ಇರಲಿಲ್ಲ ಎನ್ನುತ್ತಿದ್ದಾರೆ ‘ಹುಚ್ಚ’ ಅಭಿಮಾನಿಗಳು. ಬಿಗ್ ಬಾಸ್ ಮನೆಯೊಳಗೆ ಎಲ್ಲರು ಅವರನ್ನು ಹುಚ್ಚನಂತೆಯೇ ಕಾಣುತ್ತಿದ್ದರೆ, ಆದ್ರೆ ಅವರಲ್ಲಿನ ಒಳ್ಳೆಯ ಗುಣಗಳು ಯಾರಿಗೂ ಅರ್ಥ ಆಗುತ್ತಿಲ್ಲ, ನಮ್ಮ ಬಾಸ್ ತುಂಬಾ ಒಳ್ಳೆಯವರು ಅವರನ್ನು ಬಿಗ್ ಬಾಸ್ ಮನೆಗೆ ಮತ್ತೆ ಸೇರಿಸಿಕೊಳ್ಳದಿದ್ದರೆ , ನಾವು ಬಿಗ್ ಬಾಸ್ ಷೋ ವೀಕ್ಷಿಸುವುದನ್ನೇ ನಿಲ್ಲಿಸುತ್ತೇವೆ, ಹಾಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಮದ್ಯೆ ಹುಚ್ಚ ವೆಂಕಟ್ ಮತ್ತೆ ಮನೆ ಸೇರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಇತ್ತ ಒಂದು ವಾರದ ನಂತರ ಹುಚ್ಚ ವೆಂಕಟ್ ಮತ್ತೆ ಬಿಗ್ ಬಾಸ್ ಮನೆ ಸೇರುತ್ತಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

Write A Comment