ಅಂತರಾಷ್ಟ್ರೀಯ

ಪ್ಯಾರಿಸ್ ನಲ್ಲಿ ಹೈಸ್ಫೀಡ್ ರೈಲು ಹಳಿ ತಪ್ಪಿ ನಾಲೆಗೆ ಉರುಳಿಬಿದ್ದು 10 ಮಂದಿ ಸಾವು

Pinterest LinkedIn Tumblr

france1

ಪ್ಯಾರಿಸ್, ನ.15: ಸ್ಟಾರ‌ಸ್ ಬರ್ಗ್ ನಿಂದ ಪ್ಯಾರಿಸ್‌ಗೆ ಸಂಚರಿಸುತ್ತಿದ್ದ ಹೈಸ್ಫೀಡ್ ರೈಲು ಹಳಿ ತಪ್ಪಿ ನಾಲೆಗೆ ಉರುಳಿಬಿದ್ದ ಪರಿಣಾಮ ಹತ್ತು ಮಂದಿ ಸಾವನ್ನಪ್ಪಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಸುಮಾರು 49ಪ್ರಯಾಣಿಕರನ್ನು ಹೊತ್ತು ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದ ಈ ರೈಲು ಅತಿ ವೇಗ ಪಡೆದ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸುಮಾರು ಗಂಟೆಗೆ 300 ಕಿ.ಮೀ ವೇಗದಲ್ಲಿ ರೈಲು ಸಾಗುತ್ತಿದ್ದು, ಹಳಿ ತಪ್ಪಿದ ಮರುಕ್ಷಣವೆ ಪಕ್ಕದಲ್ಲೆ ಇದ್ದ ನೀರಿನ ನಾಲೆಗೆ ಬಿದ್ದಿದೆ. ಸ್ಥಳದಲ್ಲೆ 10ಮಂದಿ ಸಾವನ್ನಪ್ಪಿದರೆ ತೀವ್ರವಾಗಿ ಗಾಯಗೊಂಡಿದ್ದ ಅಲವರನ್ನು ಹೆಲಿಕ್ಯಾಪ್ಟರ್‌ಗಳ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ರೈಲು ಸಂಪೂರ್ಣ ನಜ್ಜು-ಗುಜ್ಜಾಗಿದ್ದು ಸ್ಥಳಕ್ಕೆ ದಾವಿಸಿದ ರಕ್ಷಣಾ ಪಡೆಗಳು ತನಿಖೆ ಆರಂಭಿಸಿವೆ.

Write A Comment