ಕರ್ನಾಟಕ

32 ವರ್ಷಗಳಿಂದ ವೇಷ ಮರೆಸಿಕೊಂಡು ಕಳ್ಳತನ ಮಾಡುತ್ತಿದ್ದಾತ ಅರೆಸ್ಟ್

Pinterest LinkedIn Tumblr

ARREST_2540291bಬೆಂಗಳೂರು: ಸುಮಾರು 32 ವರ್ಷಗಳಿಂದ ವೇಷ ಮರೆಸಿಕೊಂಡು ಮನೆಗಳ್ಳತನ ಮಾಡಿ ಐಶಾರಾಮಿ ಜೀವನ ನಡೆಸುತ್ತಿದ್ದ ಖದೀಮ, ಕುಖ್ಯಾತ ಕಳ್ಳ ಚಂದನ್ ಅಲಿಯಾಸ್ ಅಂಥೋನಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು ಕಳೆದ 32 ವರ್ಷಗಳಿಂದ ಅಂಥೋನಿ ಕಳ್ಳತನ ಮಾಡುವ ಮೂಲಕ ಐಶಾರಾಮಿ ಜೀವನ ನಡೆಸುತ್ತಿದ್ದ. ಸುಮಾರು 3 ದಶಕಗಳಿಂದ ಕಣ್ಣಾಮುಚ್ಚಾಲೆ ಆಡುತ್ತ ಓಡಾಡಿಕೊಂಡಿದ್ದ ಕುಖ್ಯಾತ ಕಳ್ಳ ಅಂಥೋನಿಯ ಬಂಡವಾಳ ಇದೀಗ ಬಯಲಾಗಿದೆ.

ಅನುಮಾನದ ಮೇರೆಗೆ ವಿವೇಕ ನಗರ ಪೊಲೀಸರು ಅಂಥೋನಿಯನ್ನು ಬಂದಿಸಿದಾಗ ಬಂಡವಾಳ ಹೊರಬಿದ್ದಿತ್ತು. ಕುಖ್ಯಾತ ಕಳ್ಳ ಅಂಥೋನಿಯಿಂದ 2.13 ಕೆಜಿ ಚಿನ್ನ, 2ಕೆಜಿಗೂ ಅಧಿಕ ಬೆಳ್ಳಿ, 5 ಲಕ್ಷಕ್ಕೂ ಅಧಿಕ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಕದ್ದ ಹಣ, ಚಿನ್ನದಿಂದ ಐಶಾರಾಮಿ ಜೀವನ ನಡೆಸುತ್ತಿದ್ದ ಖದೀಮ ಅಂಥೋನಿ ಈಗ ಜೈಲುಕಂಬಿ ಎಣಿಸುತ್ತಿದ್ದಾನೆ.
-ಉದಯವಾಣಿ

Write A Comment