ಕರ್ನಾಟಕ

ಹಿರಿಯ ಸಾಹಿತಿ ಎಚ್.ಎಸ್. ಪಾರ್ವತಿ ನಿಧನ

Pinterest LinkedIn Tumblr

hs_parvathiಬೆಂಗಳೂರು, ನ. 9: ಕನ್ನಡದ ಹಿರಿಯ ಲೇಖಕಿ, ರಂಗಭೂಮಿ ಕಲಾವಿದೆ ಎಚ್.ಎಚ್. ಪಾರ್ವತಿ(79) ಇಂದು ಬೆಳಗ್ಗೆ 7 ಗಂಟೆಗೆ ನಿಧನರಾದರು.

ಕರ್ನಾಟಕ ಲೇಖಕಿಯರ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಪಾರ್ವತಿಯವರು, ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿಯಾಗಿ, ಭಾಷಾಂತರಕಾರ್ತಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ಹಿಂದಿ ಕಾದಂಬರಿಕಾರರಾದ ಕೃಷ್ಣಚೆಂದರ ಪರಾಜಯ ಎನ್ನುವ ಕಾದಂಬರಿಯೊಂದನ್ನು ಮೊತ್ತ ಮೊದಲ ಬಾರಿಗೆ ಕನ್ನಡಕ್ಕೆ ಅನುವಾದಿಸಿದ ಪಾರ್ವತಿಯವರು, ಸ್ತ್ರೀ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಮೊದಲಿಗರಲ್ಲಿ ಒಬ್ಬರು. ಮೂವತ್ತೆರಡು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಭಾಷಾಂತರಕಾರ್ತಿಯಾಗಿ ಗುರುತಿಸಲ್ಪಟ್ಟವರು.

ಇವರು ಈವರೆಗೆ 10 ಕಾದಂಬರಿಗಳು, 7 ಕಥಾ ಸಂಕಲನಗಳು, 4 ಪ್ರಬಂಧಗಳು, 14 ಭಾಷಾಂತರ, 8 ಸಂಪಾದನೆ, 2 ಜೀವನಚರಿತ್ರೆ, 1 ನಾಟಕ ಸೇರಿ ಒಟ್ಟು 51 ಕೃತಿಗಳನ್ನು ಪ್ರಕಟಿಸಿದ್ದಾರೆ. ಓದಿನಾ ಒಳಗು ಎನ್ನುವ ಪ್ರಬಂಧಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಮತ್ತು ಪ್ರತಿಷ್ಠಿತ ಅತ್ತಿಮಬ್ಬೆ ಪ್ರಶಸ್ತಿಯೂ ಇವರಿಗೆ ದೊರೆತಿದೆ.

Write A Comment