ಕರ್ನಾಟಕ

ನಾನು ಕಪ್ಪಗಿದ್ದ ಕಾರಣ ನನಗೆ ನೋಬೆಲ್ ಪ್ರಶಸ್ತಿ ಸಿಕ್ಕಿಲ್ಲ: ಬಾಬಾ ರಾಮ್‌ದೇವ್

Pinterest LinkedIn Tumblr

baba-ramdevನವದೆಹಲಿ: ನಾನು ಕಪ್ಪಗಿದ್ದ ಕಾರಣ ನನಗೆ ನೋಬೆಲ್ ಪ್ರಶಸ್ತಿ ಸಿಕ್ಕಿಲ್ಲ ಎಂದು ಯೋಗ ಗುರು ರಾಮ್ ದೇವ್ ಬಾಬಾ ಹೇಳಿದ್ದಾರೆ.

ಶುಕ್ರವಾರ ರಾಂಚಿಯಲ್ಲಿ ನಡೆದ ಯೋಗ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಬಾ, ತ್ವಚೆ ಬೆಳ್ಳಗೆ ಇಲ್ಲದೇ ಇದ್ದುದರಿಂದ ನನಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ ಎಂದಿದ್ದಾರೆ.

ನನ್ನ ತ್ವಚೆ ಬೆಳ್ಳಗಿರುತ್ತಿದ್ದರೆ ಯೋಗದಲ್ಲಿ ನಾನು ಮಾಡಿದ ಸಾಧನೆಯನ್ನು ಪರಿಗಣಿಸಿ ನನಗೆ ನೋಬೆಲ್ ಪ್ರಶಸ್ತಿ ದಕ್ಕುತ್ತಿತ್ತು.  ಆದರೆ ನಾನು ಕಪ್ಪಗಿದ್ದೀನಲ್ಲಾ ಎಂದು ನನಗೆ ಪ್ರಶಸ್ತಿ ನೀಡಲಿಲ್ಲ.

ನಾನು ಕ್ಯಾನ್ಸರ್ ನಿಂದ ಹಿಡಿದು ಹೆಪಟೈಟಿಸಿ ಬಿ ಮೊದಲಾದ ರೋಗಗಳನ್ನು ಗುಣಪಡಿಸಿದ್ದೇನೆ. ಇದಕ್ಕೆ ಸಾವಿರಾರು ಉದಾಹರಣೆಗಳನ್ನು ನಾನು ನೀಡಬಲ್ಲೆ ಎಂದು ಹೇಳಿದ ಬಾಬಾ,  ಭಾರತ ನೋಬೆಲ್ ಪ್ರಶಸ್ತಿಗಾಗಿ ಲಾಬಿಯೇನೂ ಮಾಡುತ್ತಿಲ್ಲ ಎಂದಿದ್ದಾರೆ.

ಏತನ್ಮಧ್ಯೆ, ನಾನು ನೋಬೆಲ್ ಪ್ರಶಸ್ತಿಯ ಆಕಾಂಕ್ಷಿಯೇನೂ ಅಲ್ಲ ಎಂದಿದ್ದಾರೆ ಬಾಬಾ.

ರಾಮ್‌ದೇವ್ ಬಾಬಾ ಈ ರೀತಿ ಮಾತನಾಡುತ್ತಿರಬೇಕಾದರೆ ಆ ವೇದಿಕೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಕೂಡಾ ಉಪಸ್ಥಿತರಿದ್ದರು.

Write A Comment