ಕರ್ನಾಟಕ

ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿರುವವರ ಸಂಖ್ಯೆಯಲ್ಲಿ ಬೆಂಗಳೂರಿನ ಮಹಿಳೆಯರೇ ಹೆಚ್ಚು

Pinterest LinkedIn Tumblr

stanaಬೆಂಗಳೂರು, ನ.6-ಇತರ ಕ್ಯಾನ್ಸರ್‌ಗಳಿಗಿಂತ ಸ್ತನ ಕ್ಯಾನ್ಸರ್ ಹೆಚ್ಚು ಅಪಾಯಕಾರಿಯಾಗಿದ್ದು, ನಗರ ಪ್ರದೇಶಗಳಲ್ಲಿ  ಕಳೆದೆರಡು ದಶಕಗಳಲ್ಲಿ ಬದಲಾದ ಜೀವನಶೈಲಿಯಿಂದ ಇದರ ಪ್ರಮಾಣ ಹೆಚ್ಚಾಗಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯರಾದ ಡಾ.ನೀತಿ ರಾಯ್ಜಾದಾ ಆತಂಕ ವ್ಯಕ್ತಪಡಿಸಿದ್ದಾರೆ. ದೆಹಲಿ, ಮುಂಬೈ, ಬೆಂಗಲೂರು ಮತ್ತು ಚೆನ್ನೈ ನಗರಗಳಲ್ಲಿ ವಾಸಿಸುತ್ತಿರುವ ಪ್ರತಿ ಒಂದು ಲಕ್ಷ ಮಹಿಳೆಯರಲ್ಲಿ 23 ಮಂದಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ವೈದ್ಯಕೀಯ ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಮತ್ತೊಂದು ಆತಂಕಕಾರಿ ವಿಷಯವೆಂದರೆ ಬೆಂಗಳೂರಿನಲ್ಲೇ ಸ್ತನ ಕ್ಯಾನ್ಸರ್‌ಗೆ ತುತ್ತಾದವರ ಸಂಖ್ಯೆ ಅತ್ಯಧಿಕವಾಗಿದ್ದು, 30 ರಿಂದ 40 ವಯೋಮಾನದ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ  ಸ್ತನ ಕ್ಯಾನ್ಸರ್ ಬಗ್ಗೆ ಅರಿವಿನ ಕೊರತೆ ಇದೆ ಎಂದರು.

ಸ್ತನ ಕ್ಯಾನ್ಸರ್ ಹೆಚ್ಚಳಕ್ಕೆ ಬಹುಮಟ್ಟಿಗೆ ಜೀವನಶೈಲಿಯೇ ಕಾರಣವಾಗಿದೆ. ಇದಲ್ಲದೆ,  ತಡವಾಗಿ ಮದುವೆಯಾಗುವುದು, ತಡವಾಗಿ ಗರ್ಭ ಧರಿಸುವುದು, ಹಾಲುಣಿಸುವ ಅವಧಿಯನ್ನು ಕಡಿಮೆ ಮಾಡುವುದು, ಬೊಜ್ಜುತನ, ಧೂಮಪಾನ, ಮದ್ಯಪಾನ ಕಾರಣವಾಗಿದೆ ಎಂದು ಡಾ.ರಾಯ್ಜಾದಾ ತಿಳಿಸಿದರು.

Write A Comment