ಕರ್ನಾಟಕ

ಬೆಂಗಳೂರು ಕಸದ ಸಮಸ್ಯೆ : ಸಿಎಂ ಸಿದ್ದರಾಮಯ್ಯ ಸಂಧಾನ ಸಭೆ

Pinterest LinkedIn Tumblr

smಬೆಂಗಳೂರು, ನ.6-  ಬಿಬಿಎಂಪಿಯ ಕಸ ವಿಲೇವಾರಿಗೆ ಎಲ್ಲೆಡೆಯಿಂದಲೂ ಅಡಚಣೆ ಎದುರಾಗಿತ್ತಿರುವ ಹಿನ್ನೆಲೆಯಲ್ಲಿ  ಮುಖ್ಯಮಂತ್ರಿ ಸಿದ್ದರಾಮ ಯ್ಯ ಇಂದು ಟೆರ್ರಾಫಾರಂ ಮತ್ತು ಎಂಎಸ್‌ಜಿಟಿ ಘಟಕಗಳ ಸುತ್ತಮುತ್ತಲಿನ ಗ್ರಾಮಸ್ಥರ ಜೊತೆ ಮಾತುಕತೆ  ನಡೆಸಿ, ಮನವೊಲಿಸುವ ಪ್ರಯತ್ನ ನಡೆಸಿದರು.  ಕಳೆದ ಐದಾರು  ವರ್ಷಗಳಿಂದಲೂ ಟೆರ್ರಾಫಾರಂ ಮತ್ತು ಎಂಎಸ್‌ಜಿಟಿ ಘಟಕಗಳಲ್ಲಿ ಕಸ ಹಾಕಲಾಗುತ್ತಿದ್ದು, ಇತ್ತೀಚೆಗೆ ಅಲ್ಲಿನ ಸ್ಥಳೀಯ ನಿವಾಸಿಗಳು ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ  ಬೆಂಗಳೂರು ಕಸ ವಿಲೇವಾರಿ ಅಸ್ತವ್ಯಸ್ತಗೊಂಡಿತ್ತು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ , ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಕೃಷಿ ಸಚಿವ ಕೃಷ್ಣ ಭೈರೇಗೌಡ ಸೇರಿದಂತೆ ಹಲವಾರು ಮಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ  ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಅವರ ಜೊತೆ ಖುದ್ದಾಗಿ ಸಭೆ ಏರ್ಪಡಿಸುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಇಂದು ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ವೆಂಕಟರಮಣಪ್ಪ  ತ್ಯಾಜ್ಯ ವಿಲೇವಾರಿ ಘಟಕಗಳ ಸುತ್ತಮುತ್ತಲಿನ ಜನಪ್ರತಿನಿಧಿಗಳ  ಜೊತೆ ಸಿಎಂ ಸಿದ್ದರಾಮಯ್ಯ ಇಂದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.
***
* ಕಸದ ಸಮಸ್ಯೆ ನಿವಾರಣೆಗೆ ನೀಡಿ :  ಮೇಯರ್ ಮಂಜುನಾಥರೆಡ್ಡಿ
ಬೆಂಗಳೂರು, ನ.6- ನಗರವನ್ನು ಕಾಡುತ್ತಿರುವ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ದಲ್ಲಿ ಸಂಘ-ಸಂಸ್ಥೆಗಳು ಸಹಕಾರ ನೀಡಬೇಕೆಂದು ಮೇಯರ್ ಮಂಜುನಾಥರೆಡ್ಡಿ ಇಂದಿಲ್ಲಿ ಮನವಿ ಮಾಡಿದರು.
ಬೆಂಗಳೂರು ಎಲೆಕ್ಟ್ರಾನಿಕ್ಸ್ ಡೀಲರ್ಸ್ು ಅಸೋಸಿಯೇಷನ್ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ/ ಸ್ವಚ್ಛ ಎಸ್‌ಪಿ ರೋಡ್ ವಿನೂತನ ಕಾರ್ಯಕ್ರಮದಲ್ಲಿ ವ್ಯಾಪಾರಿಗಳಿಗೆ ಹಸಿ ಮತ್ತು ಘನತ್ಯಾಜ್ಯ ಬೇರ್ಪಡಿಸುವ ಒಂದು ಸಾವಿರ ಡಸ್ಟ್‌ಬಿನ್ ವಿತರಿಸಿ ಅವರು ಮಾತನಾಡಿದರು. ನಗರದಲ್ಲಿ ಕಸದ ಸಮಸ್ಯೆ ಉಲ್ಬಣವಾಗುತ್ತಿದೆ. ವ್ಯಾಪಾರಿಗಳು, ಸಾರ್ವಜನಿಕರು ಹಸಿ ಮತ್ತು ಘನತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ ನೀಡಿದರೆ ಸ್ವಲ್ಪಮಟ್ಟಿನ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು. ವ್ಯಾಪಾರಿಗಳು ಕಸ ಬೇರ್ಪಡಿಸಿ ಕೊಡುವತ್ತ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

ಕಸದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅಸೋಸಿಯೇಷನ್‌ನವರು ಎಸ್‌ಪಿ ರೋಡ್‌ನ ಎರಡು ರಸ್ತೆಗಳನ್ನು ಆಯ್ಕೆ ಮಾಡಿಕೊಂಡು ಸ್ವಚ್ಛ ಭಾರತಕ್ಕೆ ಕೈ ಹಾಕಿರುವುದು ಸ್ವಾಗತಾರ್ಹ. ಆಯ್ಕೆ ಮಾಡಿಕೊಂಡಿರುವ ಎರಡೂ ರಸ್ತೆಗಳ ಕಸ ವಿಲೇವಾರಿಗೆ ಅಸೋಸಿಯೇಷನ್‌ನವರೇ ಪೌರ ಕಾರ್ಮಿಕರನ್ನು ನೇಮಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು. ನಗರದ ಹಲವಾರು ಸಂಘ-ಸಂಸ್ಥೆಗಳು, ವಾಣಿಜ್ಯ ಸಂಘಟನೆಗಳು ಮತ್ತಿತರ ಸಂಸ್ಥೆಗಳು ಇದೇ ನೀತಿಯನ್ನು ಅನುಸರಿಸಿದರೆ ಒಳ್ಳೆಯದಾಗುತ್ತದೆ. ಈ ನಿಟ್ಟಿನಲ್ಲಿ ಆಸಕ್ತಿ ತೋರಿ ಎಂದು ಸಲಹೆ ನೀಡಿದರು. ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ನಾವು ಕೂಡಾ ಎಲ್ಲಾ ಕ್ರಮಕೈಗೊಂಡಿದ್ದೇವೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಉಪಮೇಯರ್ ಹೇಮಲತಾ ಗೋಪಾಲಯ್ಯ, ಬಿಬಿಎಂಪಿ ಸದಸ್ಯೆ ಪ್ರತಿಮಾ, ಜಂಟಿ ಆಯುಕ್ತ ಹೇಮಚಂದ್ರಸಾಗರ್, ಅಸೋಸಿಯೇಷನ್ ಮುಖ್ಯಸ್ಥ ಮಹಾವೀರ್ ಮತ್ತಿತರರು ಪಾಲ್ಗೊಂಡಿದ್ದರು.

Write A Comment