ರಾಷ್ಟ್ರೀಯ

ದಿಗ್ವಿಜಯ್, ಲಾಲು, ಓವೈಸಿ, ಆಜಂ ಖಾನ್ ಪ್ರತ್ಯೇಕತಾವಾದಿಗಳು: ಆರೆಸ್ಸೆಸ್

Pinterest LinkedIn Tumblr

mohanಲಕ್ನೋ: ದೇಶದ ರಾಜಕಾರಣಿಗಳಾದ ದಿಗ್ವಿಜಯ್ ಸಿಂಗ್, ಲಾಲು ಪ್ರಸಾದ್, ಅಸಾದುದ್ದೀನ್ ಓವೈಸಿ, ಆಜಂ ಖಾನ್ ಮತ್ತು ಇತಿಹಾಸಕಾರ ಇರ್ಫಾನ್ ಹಬೀಬ್ ಪ್ರತ್ಯೇಕತಾವಾದಿಗಳಂತೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರೋಪಿಸಿದೆ.

ಬಾಟ್ಲಾ ಎನ್‌ಕೌಂಟರ್ ನಡೆದ ಸಂದರ್ಭದಲ್ಲಿ ಪ್ರತಿಯೊಬ್ಬರು ಪೊಲೀಸರ ಕಾರ್ಯವನ್ನು ಶ್ಲಾಘಿಸುತ್ತಿರುವಾಗ, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಉಗ್ರರ ಪರವಾಗಿ ವಾದಿಸಿದ್ದರು ಎಂದು ಆರೆಸ್ಸೆಸ್ ಮುಖಂಡ ಪ್ರಭು ನರೈನ್ ಶ್ರೀವಾಸ್ತವಾ ವಾಗ್ದಾಳಿ ನಡೆಸಿದ್ದಾರೆ.

ಉತ್ತರಪ್ರದೇಶದ ನಗರಾಭಿವೃದ್ಧಿ ಸಚಿವ ಆಜಂಖಾನ್, ಭಾರತ ಮಾತೆಯನ್ನು ರಾಕ್ಷಸಿ ಎಂದು ಬಿಂಬಿಸಿದ್ದರು ಎಂದು ಕಿಡಿಕಾರಿದ್ದಾರೆ.

ದೇಶದಲ್ಲಿ ಮುಸ್ಲಿಂ ಮತ್ತು ಹಿಂದುಗಳ ಜನಸಂಖ್ಯೆಯಲ್ಲಿ ಅಸಮತೋಲನ ಉಂಟಾಗುತ್ತಿದೆ. ಮುಸ್ಲಿಂ ಜನಸಂಖ್ಯೆಯಲ್ಲಿ ಶೇ, 8 ರಿಂದ ಶೇ.14 ರಷ್ಟು ಏರಿಕೆಯಾಗಿದೆ. ಆದರೆ, ಹಿಂದುಗಳ ಜನಸಂಖ್ಯೆಯಲ್ಲಿ ಭಾರಿ ಕುಸಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿರುವ ಪ್ರತಿಯೊಬ್ಬ ಭಾರತೀಯರು ಹಿಂದುಗಳು ಎಂದು ಆರೆಸ್ಸೆಸ್ ಹೇಳುತ್ತಿರುವಾಗ ಜನಸಂಖ್ಯೆ ಹೆಚ್ಚಳದ ಬಗ್ಗೆ ಆತಂಕಪಡುವ ಕಾರಣದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜನಸಂಖ್ಯೆ ಅಸಮತೋಲನದಿಂದ ದೇಶ ಇಬ್ಬಾಗವಾಗುತ್ತದೆ ಎಂದು ಆರೆಸ್ಸೆಸ್ ಮುಖಂಡ ಪ್ರಭು ನರೈನ್ ಶ್ರೀವಾಸ್ತವಾ ಹೇಳಿದ್ದಾರೆ.

Write A Comment