ರಾಷ್ಟ್ರೀಯ

ಬಿಹಾರ್ ಚುನಾವಣಾ ಫಲಿತಾಂಶ ಮೋದಿ ಸರ್ಕಾರದ ಮೇಲಿನ ಜನಾಭಿಪ್ರಾಯವಲ್ಲ: ಬಿಜೆಪಿ

Pinterest LinkedIn Tumblr

biನವದೆಹಲಿ: ದೇಶದಾದ್ಯಂತ ಕುತೂಹಲ ಕೆರಳಿಸಿರುವ ಬಿಹಾರ್ ವಿಧಾನ ಸಭಾ ಚುನಾವಣೆ ನಿನ್ನೆ ಸಮಾಪ್ತಿಯಾಗಿದ್ದು, ಕೆಲ ಸಮೀಕ್ಷೆಗಳು ನಿತೀಶ್ ಮೈತ್ರಿಕೂಟಕ್ಕೆ ಬಹುಮತ ದೊರೆಯಲಿದೆ ಎಂದು ವರದಿಗಳು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಚುನಾವಣಾ ಫಲಿತಾಂಶ ಮೋದಿ ಸರ್ಕಾರದ ಮೇಲಿನ ಜನಾಭಿಪ್ರಾಯವಲ್ಲ ಎಂದು ಹೇಳಿದೆ.

ಬಿಹಾರ್ ಚುನಾವಣಾ ಫಲಿತಾಂಶ  ಕೇಂದ್ರದಲ್ಲಿ ಆಳ್ವಿಕೆಯಲ್ಲಿರುವ ನರೇಂದ್ರ ಮೋದಿ ಸರ್ಕಾರದ ಪ್ರದರ್ಶನದ ಮೇಲೆ ಜನ ನೀಡಿದ ಅಭಿಪ್ರಾಯವಾಗುವುದಿಲ್ಲ. ಬದಲಾಗಿ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಮತ್ತು ಜಂಗಲ್ ರಾಜ್‌ನಿಂದ ರೋಸಿ ಹೋದ ಜನ ನೀಡಿದ ಅಭಿಪ್ರಾಯವಾಗಿರುತ್ತದೆ ಎಂದು ಬಿಜೆಪಿ ಹೇಳಿದೆ.

ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ತಾವು  ಮೂರನೆಯ ಎರಡರಷ್ಟು ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೇರಲಿದ್ದೇವೆ ಎಂದು ಪ್ರತಿಪಾದಿಸುತ್ತಿರುವ ಬಿಜೆಪಿ ವಿಶ್ವಾಸಕ್ಕೆ ವಿರುದ್ಧವಾಗಿ ಹೊರಬಂದಿದ್ದು, ಫಲಿತಾಂಶಕ್ಕಾಗಿ ಮತ್ತೆರಡು ದಿನ ಕಾಯುತ್ತೇವೆ ಎಂದು ಕೇಂದ್ರ ಸಚಿವರಾದ ಅನಂತ ಕುಮಾರ್ ಹೇಳಿದ್ದಾರೆ.

Write A Comment