ರಾಷ್ಟ್ರೀಯ

ಸೈಬರ್ ಕ್ರೈಮ್ ದೊಡ್ಡ ಅಪಾಯವಾಗಿ ಬೆಳೆದಿದೆ: ರಾಜನಾಥ್ ಸಿಂಗ್

Pinterest LinkedIn Tumblr

rajನವದೆಹಲಿ: ಸೈಬರ್ ಅಪರಾಧ ದೇಶಕ್ಕೆ ಬಹುದೊಡ್ಡ ಸಮಸ್ಯೆಯಾಗಿ ತಲೆದೋರಿದ್ದು ವಿವಿಧ ವಿಚ್ಛಿದ್ರಕಾರಕ ಶಕ್ತಿಗಳು ಅಂತರ್ಜಾಲದಲ್ಲಿ ಯುವ ಮನಸ್ಸುಗಳಿಗೆ ಆಮಿಷ ಒಡ್ಡುತ್ತಾರೆ  ಮತ್ತು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಮಾಹಿತಿ ಭದ್ರತಾ ಸಮ್ಮೇಳನ-  ‘ಗ್ರೌಂಡ್ ಜೀರೊ ಶೃಂಗಸಭೆ-2015 ‘,ದಲ್ಲಿ ಮಾತನಾಡುತ್ತಿದ್ದ ಅವರು ಸರ್ಕಾರ ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಕಳವಳವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸೈಬರ್ ಭದ್ರತೆಯನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸರ್ಕಾರ ಆದಷ್ಟು ಬೇಗ ಸೈಬರ್ ಕ್ರೈಮ್ ಸಮನ್ವಯ ಕೇಂದ್ರವನ್ನು ಸ್ಥಾಪಿಸಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

Write A Comment