ಕರ್ನಾಟಕ

ಸಿಎಂ ರುಂಡ ಚೆಂಡಾಡು ಪ್ರಕರಣ: ಬಿಜೆಪಿ ನಾಯಕನಿಗೆ ಷರತ್ತುಬದ್ಧ ಜಾಮೀನು

Pinterest LinkedIn Tumblr

chennabasappaಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರುಂಡ ಚೆಂಡಾಡುವುದಾಗಿ ಹೇಳುವ ಮೂಲಕ ಬಂಧನಕ್ಕೊಳಗಾಗಿದ್ದ ಬಿಜೆಪಿ ನಾಯಕ ಎಸ್.ಎನ್. ಚೆನ್ನಬಸಪ್ಪ ಅವರಿಗೆ ಶಿವಮೊಗ್ಗ ಎರಡನೇ ಜಿಎಂಎಫ್ ಸಿ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷ ಚೆನ್ನಬಸಪ್ಪ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಎರಡನೇ ಜೆಎಂಎಫ್ ಸಿ ಕೋರ್ಟ್, ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿದೆ.

ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ  ಚೆನ್ನಬಸಪ್ಪ ಅವರ ವಿರುದ್ಧ ಕಾಂಗ್ರೆಸ್ ದೂರು ನೀಡಿತ್ತು. ಕಾಂಗ್ರೆಸ್ ದೂರಿನನ್ವಯ ಚೆನ್ನಬಸಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು.

ಗೋಮಾಂಸ ಸೇವನೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆ ವಿರೋಧಿಸಿ ಬಿಜೆಪಿ ವತಿಯಿಂದ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಪ್ರತಿಭಟನೆಯೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಚೆನ್ನಬಸಪ್ಪ ಅವರು, ಅವರಿಗೆ ನಿಜಕ್ಕೂ ಧೈರ್ಯವಿದ್ದರೆ ಶಿವಮೊಗ್ಗದ ಗೋಪಿ ವೃತ್ತಕ್ಕೆ ಬಂದು ಗೋಮಾಂಸ ತಿಂದಿದ್ದೇ ಆದರೆ, ಅವರ ರುಂಡ ಚೆಂಡಾಡುವುದಕ್ಕೂ ನಾವು ಎರಡನೇ ಬಾರಿ ಯೋಚಿಸುವುದಿಲ್ಲ ಎಂದಿದ್ದರು.

Write A Comment