ಅಂತರಾಷ್ಟ್ರೀಯ

ಸುಡಾನ್ ವಿಮಾನ ಪತನ: 40 ಸಾವು

Pinterest LinkedIn Tumblr

plane-crash

ಜುಬಾ: ದಕ್ಷಿಣ ಸುಡಾನ್ ರಾಜಧಾನಿ ಜುಬಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸರಕು ವಿಮಾನವೊಂದು ಪತನಗೊಂಡಿದ್ದು, ಪರಿಣಾಮ 40 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ ಎಂದು ವರದಿಗಳು ತಿಳಿಸಿವೆ.

ನೈಲ್ ನದಿಯ ಉತ್ತರ ಭಾಗದ ಪಲೋಚ್ ಗೆ ತೆರಳುತ್ತಿದ್ದ ಈ ಕಾರ್ಗೋ ವಿಮಾನವು ಜುಬಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 800 ಮೀ. ಎತ್ತರಕ್ಕೆ ಹಾರಾಟ ನಡೆಸಿತ್ತು. ಈ ವೇಳೆ ಇದ್ದಕ್ಕಿದ್ದಂತೆ ನೆಲಕ್ಕೆ ಅಪ್ಪಳಿಸಿದ ಪರಿಣಾಮ 40 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.

ವಿಮಾನದಲ್ಲಿ ಎಷ್ಟು ಮಂದಿಯಿದ್ದರೆಂಬುದು ಈ ವರೆಗೂ ತಿಳಿದುಬಂದಿಲ್ಲ. ಆದರೆ, ವಿಮಾನ ಪತನಗೊಂಡ ಸ್ಥಳದಲ್ಲಿ 40 ಮಂದಿಯ ಶವಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

Write A Comment