ಅಂತರಾಷ್ಟ್ರೀಯ

ಕಪ್ಪು ಹಣ ವಾಪಸ್ ತರಲು ಸಹಕಾರ ನೀಡುವಂತೆ ವಿದೇಶಗಳಿಗೆ ಮನವಿ ಮಾಡಿದ ಭಾರತ

Pinterest LinkedIn Tumblr

kappuಸೈಂಟ್‌ಪೀಟರ‌ಸ್ು ಬರ್ಗ್, ನ.4- ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರುವ ಬಗ್ಗೆ ಅತ್ಯಂತ ಕಠಿಣ ನಿಲುವು ತಳೆದಿರುವ ಭಾರತ ತಮ್ಮ ಬ್ಯಾಂಕ್‌ಗಳಲ್ಲಿರುವ ವಿದೇಶಿ ಕಪ್ಪು ಹಣ ಕುರಿತಾದ ಮಾಹಿತಿಗಳನ್ನು ಇತರ ರಾಷ್ಟ್ರಗಳ ಜೊತೆ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಹೇಳಿದೆ.

ರಷ್ಯಾದ ಪೈಂಟ್ ಪೀಟರ್ಸ್್ ಬರ್ಗ್‌ನಲ್ಲಿ ನಡೆದ 6ನೇ ಸಭೆಯಲ್ಲಿ ಕಪ್ಪು ಹಣ ಕುರಿತಂತೆ ತನ್ನ ನಿಲುವವನ್ನು ಪ್ರತಿಪಾದಿಸಿದ ಭಾರತ ಈ ಸಭೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ಮಹತ್ವದ ಸಭೆಯಾಗಿದ್ದು, ಯಾವುದೇ ದೇಶಗಳ ಆತಳಿತಗಳೂ ಕಪ್ಪು ಹಣದ ದಾಖಲೆ ಬಗ್ಗೆ ಏನನ್ನೂ ಮುಚ್ಚಿಟ್ಟುಕೊಳ್ಳದೆ ಮುಕ್ತವಾಗಿ ಸಂಬಂಧಪಟ್ಟ ದೇಶಗಳ ಸರ್ಕಾರಗಳ ಜೊತೆ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದು ಭಾರತ ಹೇಳಿದೆ.

ನಮ್ಮ ಈ ಕಪ್ಪು ಹಣ ವಾಪಸಿ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದ್ದು , ಎಲ್ಲಾ ದೇಶಗಳ, ಎಲ್ಲ ರಾಜಕೀಯ ಪಕ್ಷಗಳೂ ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ಪರಸ್ಪರ ಸಹಕಾರ ನೀಡಬೇಕು ಎಂದು ಕೇಂದ್ರ ಜಾಗೃತದಳ ಆಯುಕ್ತ ಕೆ.ವಿ.ಚೌಧುರಿ ಹೇಳಿದ್ದಾರೆ.

Write A Comment