ಕರ್ನಾಟಕ

ಮೃತ ಪಿಎಸ್ಐ ಜಗದೀಶ್ ಕುಟುಂಬಕ್ಕೆ ರು.30 ಲಕ್ಷ ಚೆಕ್ ಹಸ್ತಾಂತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

Siddaramaiah

ಬೆಂಗಳೂರು: ಬೈಕ್ ಕಳ್ಳರಿಂದ ಹತ್ಯೆಯಾಗಿದ್ದ ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್ಐ ಜಗದೀಶ್ ಅವರ ಪತ್ನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ 30 ಲಕ್ಷ ರುಪಾಯಿ ಪರಿಹಾರದ ಚೆಕ್’ನ್ನು ಹಸ್ತಾಂತರಿಸಿದರು.

ಇಂದು ಹುತಾತ್ಮ ಪೊಲೀಸ್ ದಿನಾಚರಣೆ ಪ್ರಯುಕ್ತ ನಗರದ ಚಾಮರಾಜಪೇಟೆ ಮೈದಾನದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದ ಸಿಎಂ, ಜಗದೀಶ್ ಕುಟುಂಬಕ್ಕೆ ಇಲಾಖೆ ವತಿಯಿಂದ 30 ಲಕ್ಷ ರುಪಾಯಿ ಮೊತ್ತದ ಚೆಕ್ ನೀಡಿ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಸಿಎಂ, ಜಗದೀಶ್ ಅವರ ಪತ್ನಿಗೆ ಜೀವನ ಪರ್ಯಂತ ಮಾಸಾಶನ ನೀಡುವುದಾಗಿ ಹೇಳಿದರು.

ಕರ್ತವ್ಯ ನಿರ್ವಹಣೆಯ ವೇಳೆ ಹುತಾತ್ಮರಾದ ರಾಯಚೂರಿನ ಎಸ್ಐ ವೀರಣ್ಣಗೌಡ, ಮಂಗಳೂರಿನ ಹೆಡ್ ಕಾನ್ಸ್ ಸ್ಟೇಬಲ್ ಎ.ಪಿ.ಭಾಸ್ಕರ್ ಹಾಗೂ ಚಾಮರಾಜನಗರದ ಹೆಡ್ ಕಾನ್ಸ್ ಸ್ಟೇಬರ್ ಸಿದ್ದರಾಜು ಸೇರಿದಂತೆ 11 ಪೊಲೀಸ್ ಸಿಬ್ಬಂದಿಗೆ ಇಲಾಖೆವತಿಯಿಂದ ಗೌರವ ಸಲ್ಲಿಸಲಾಯಿತು.

ಪೊಲೀಸ್ ಹುತಾತ್ಮರ ದಿನಾಚರಣಾ ಕಾರ್ಯಕ್ರಮದಲ್ಲಿ ಗೃಹಸಚಿವ ಕೆ.ಜೆ.ಜಾರ್ಜ್, ಡಿಜಿಪಿ ಓಂಪ್ರಕಾಶ್, ನಗರ ಪೊಲೀಸ್ ಆಯುಕ್ತ ಮೇಘರಿಕ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಉದ್ಯೋಗಕ್ಕೆ ಮನವಿ
ಇದೇ ವೇಳೆ ಮೃತ ಜಗದೀಶ್ ಪತ್ನಿ ರಮ್ಯಾ ಅವರು ಎಂ.ಕಾಂ ಪದವೀಧರೆಯಾಗಿದ್ದು, ಅವರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಬೇಕೆಂದು ಕುಟುಂಬ ವರ್ಗ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದರು.

Write A Comment