ಮಂಗಳೂರು,ಅ.21:ದಸರಾ ಹಬ್ಬದ ನಿಮಿತ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆಗಳು ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಮಕ್ಕಳು ಮಹಿಳೆಯರು ಸೇರಿದಂತೆ ಸಾವಿರಾರು ಜನರು ಭಾಗವಹಿಸಲಿದ್ದು, ಅಂತಹ ಕಡೆಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಪೋಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅ. 20 ರಿಂದ 24 ರ ಬೆಳಿಗ್ಗೆ 6 ಗಂಟೆಯವರೆಗೆ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮಂಗಳೂರು ಸುರತ್ಕಲ್ ಠಾಣೆ , ಕಾವೂರು ಠಾಣೆ – ಅ. 21 ರಂದು ಮ. 3 ಗಂಟೆಯಿಂದ ಅ.22 ರ ಬೆಳಿಗ್ಗೆ 6 ಗಂಟೆವರೆಗೆ, ಮೂಲ್ಕಿ ಪೋಲೀಸ್ ಠಾಣೆ ಅ. 21ರ ಮಧ್ಯಾಹ್ನ 3 ಗಂಟೆಯಿಂದ ಅ.22 ರ ಬೆಳಿಗ್ಗೆ 6 ರ ವರೆಗೆ, ಉರ್ವಾ ಪೋಲೀಸ್ ಠಾಣೆ, ಅ. 21 ರಂದು ಮ. 3 ಗಂಟೆಯಿಂದ ಅ.22 ರ ಬೆಳಿಗ್ಗೆ 6 ರ ವರೆಗೆ, ಮಂಗಳೂರು ದಕ್ಷಿಣ ಪೋಲೀಸ್ ಠಾಣೆ ಅ. 22 ರ ಮ. 3 ಗಂಟೆಯಿಂದ 23 ರ ಬೆ. 6 ಗಂಟೆ, ಮಂಗಳೂರು ಗ್ರಾಮಾಂತರ ಪೋಲೀಸ್ ಠಾಣೆ ಅ. 22 ರ ಮಧ್ಯಾಹ್ನ 3ಗಂಟೆಯಿಂದ ಅ.23 ರ ಬೆಳಿಗ್ಗೆ 6 ರವರೆಗೆ, ಪಣಂಬೂರು ಪೋಲೀಸ್ ಠಾಣೆ ಅ.22ಮ.3 ಗಂಟೆಯಿಂದ ಅ. 23 ರ ಬೆ. 6 ಗಂಟೆ, ಬಜಪೆ ಪೋಲೀಸ್ ಠಾಣೆ ಅ.22ಮ.3 ರಿಂದ ಅ. 23 ರ ಬೆ. 6 ಗಂಟೆ ಮಂಗಳೂರು ಉತ್ತರ ಪೋಲೀಸ್ ಠಾಣೆ ಅ.22 ರ ಮ.3ರಿಂದ ಅ.23 ರ ಬೆ.6 ರವರೆಗೆ, ಮಂಗಳೂರು ದಕ್ಷಿಣ ಪೋಲೀಸ್ ಠಾಣೆ ಅ.23 ರ ಮ.3ರಿಂದ ಅ.24ರ ಬೆ.6 ರವರೆಗೆ, ಉಳ್ಳಾಲ ಪೋಲೀಸ್ ಠಾಣೆ ಅ.23 ರ ಮ.3ರಿಂದ ಅ.24 ಬೆ.6 ರವರೆಗೆ, ಕೋಣಾಜೆ ಪೋಲೀಸ್ ಠಾಣೆ ಅ.23 ರ ಮ.3ರಿಂದ ಅ.24 ರ ಬೆ.6 ರವರೆಗೆ, ಉತ್ತರ ಪೋಲೀಸ್ ಠಾಣೆ ಅ.23ರ ಮ.3ರಿಂದ ಅ.24ರ ಬೆ.6 ರವರೆಗೆ, ಮಂಗಳೂರು ದಕ್ಷಿಣ ಪೋಲೀಸ್ ಠಾಣೆ ಅ.24 ರ ಮ.3ರಿಂದ ಅ.25 ರ ಬೆ.6 ರವರೆಗೆ, ಮಂಗಳೂರು ಉತ್ತರ ಪೋಲೀಸ್ ಠಾಣೆ ಅ.24 ರ ಮ.3ರಿಂದ ಅ.25 ರ ಬೆ.6 ರವರೆಗೆ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ.
