ಕರ್ನಾಟಕ

ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಪ್ರಕಾಶ್ ಶವ ಪತ್ತೆ

Pinterest LinkedIn Tumblr

pra

ಬೆಂಗಳೂರು,ಅ.8:ನಾಗವಾರ ವರ್ತುಲ ರಸ್ತೆಯ ಮಾನ್ಯತಾ ಟೆಕ್‍ಪಾರ್ಕ್‍ನ ಹಿಂಭಾಗದ ವೀರಣ್ಣಪಾಳ್ಯದ ಬಳಿಯ ದಾಸರಹಳ್ಳಿ ರಾಜಾಕಾಲುವೆಯಿಂದ ನಿನ್ನೆ ಮಧ್ಯಾಹ್ನ ಕೊಚ್ಚಿ ಹೋಗಿರುವ ಬಾಲಕ ಪ್ರಕಾಶ್‍ನ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.

ದಾಸರಹಳ್ಳಿಯ ಕೆರೆಯ ಬಳಿಯ ರಾಜಕಾಲುವೆಯಿಂದ ಇಂದು ಮುಂಜಾನೆಯಿಂದ ಮತ್ತೆ ಕಾರ್ಯಚರಣೆ ನಡೆಸಿದ ಅಗ್ನಿಶಾಮಕ ದಳ ಮತ್ತು ಪೆÇಲೀಸರು ಅಲ್ಲಿಂದ ಸುಮಾರು ಒಂದು ಕಿ.ಮೀ.ದೂರದಲ್ಲಿ ಬೆಳಿಗ್ಗೆ 10 ರವೇಳೆ ಕೊಚ್ಚಿ ಹೋದ ಪ್ರಕಾಶನ ಮೃತದೇಹ ಪತ್ತೆಹಚ್ಚಿದ್ದಾರೆ.

ದೇವರ ಜೀವನಹಳ್ಳಿ ತಮಿಳ್ ಸಂಘಂ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಸುಲ್ತಾನ್ ಪಾಳ್ಯದÀ ನಿವಾಸಿ ಪೇಂಟರ್ ವೆಂಕಟೇಶ್ ಹಾಗೂ ಶಾಲೆಯೊಂದರಲ್ಲಿ ಸಹಾಯಕಿಯಾಗಿದ್ದ ಜಯಮ್ಮ ದಂಪತಿಯ 15 ವರ್ಷದ ಮಗ ಪ್ರಕಾಶ್, ನಿನ್ನೆ ಶಾಲೆಗೆ ಹೋಗದೇ ಅಣ್ಣ ಸೂರ್ಯ ಹಾಗೂ ಸ್ನೇಹಿತ ಚಾಲ್ರ್ಸ್ ಜೊತೆ ಆಟವಾಡಲು ಹೋಗಿದ್ದಾನೆ.

ಮಧ್ಯಾಹ್ನ 3.30 ರಲ್ಲಿ ಮಾನ್ಯತಾ ಟೆಕ್‍ಪಾರ್ಕ್‍ನ ಹಿಂಭಾಗದ ವೀರಣ್ಣಪಾಳ್ಯದ ಬಳಿಯ ದಾಸರಹಳ್ಳಿ ಬಳಿ ಆಟ ವಾಡುತ್ತಿದ್ದ ಈ ಮೂವರು ರಾಜಕಾಲುವೆಯ ಕಟ್ಟೆಯ ಬಳಿ ಈಜಾಡಲು ಹೋದಾಗ ಪ್ರಕಾಶ್ ರಾಜಾಕಾಲುವೆಯ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದ.

ಪ್ರಕಾಶ್‍ನನ್ನು ರಕ್ಷಿಸಲು ಅಣ್ಣ ಸೂರ್ಯ ಹಾಗೂ ಸ್ನೇಹಿತ ಚಾಲ್ರ್ಸ್ ಕೂಗಾಡಿದಾಗ ಸ್ಥಳಕ್ಕೆ ಬಂದ ಸ್ಥಳೀಯರು ನೆರವು ನೀಡಿದರಾದರೂ ಪ್ರಕಾಶ್‍ನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ,ನೋಡು ನೋಡುತ್ತಿದ್ದಂತೆ ಕೊಚ್ಚಿ ಹೋಗುತ್ತಿದ್ದ ಬಾಲಕನ ಪತ್ತೆ ಮಾಡಲು ಆಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಸುದ್ಧಿ ಮುಟ್ಟಿಸಲಾಯಿತು.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಮತ್ತು ಪೆÇಲೀಸರು ಶೋಧಕಾರ್ಯ ನಡೆಸಿದಾಗ ಕಾಲುವೆಯಲ್ಲಿ ತುಂಬಿದ್ದ ಹೂಳು ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿತು ವಿದ್ಯುತ್ ದೀಪಗಳನ್ನು ಅಳವಡಿಸಿ ರಾತ್ರಿ 7.30ರವರೆಗೆ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಯಿತಾದರೂ ಬಾಲಕನ ಮೃತದೇಹ ಪತ್ತೆಯಾಗಿರಲಿಲ್ಲ.

ರಾಜಕಾಲುವೆ 8 ರಿಂದ 9 ಅಡಿ ಆಳವಿರುವುದಲ್ಲದೇ ಕತ್ತಲಾವರಿಸಿ ಮಳೆ ಬೀಳುತ್ತಿದ್ದರಿಂದ ಶೋಧ ಕಾರ್ಯವನ್ನು ಸ್ಥಗಿತಗೊಳಿಸಿ ಇಂದು ಮುಂಜಾನೆಯಿಂದ ಮತ್ತೆ ಶೋಧ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಮತ್ತು ಪೆÇಲೀಸರಿಗೆ ದಾಸರಹಳಿ ಕೆರೆಯಿಂದ ಸುಮಾರು ಒಂದು ಕಿ,ಮೀ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿರುವ ಸಂಪಿಗೆ ಹಳ್ಳಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment