ರಾಷ್ಟ್ರೀಯ

ಅಶ್ಲೀಲ ಚಿತ್ರ ನೋಡುವಲ್ಲಿ ಭಾರತೀಯರೇ ಅತಿ ಹೆಚ್ಚು !

Pinterest LinkedIn Tumblr

porn Karnataka office

ಪುಣೆ,ಅ.8: ನಿಷೇಧವಿರಲಿ, ಬಿಡಲಿ ಭಾರತದಲ್ಲಿ ಅತಿ ಹೆಚ್ಚು ಜನರು ಗೂಗಲ್ ಸರ್ಚ್‍ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ ಎಂದು ದಾಖಲೆಗಳು ಬಹಿರಂಗಗೊಳಿಸಿದೆ.

ಅತಿ ಹೆಚ್ಚು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಮೊದಲ 10 ನಗರಗಳಲ್ಲಿ ಮೊದಲ 6 ಸ್ಥಾನಗಳನ್ನು ಕ್ರಮವಾಗಿ ದೆಹಲಿ, ಪುಣೆ, ಮುಂಬೈ, ಹೌರ್ಹಾ, ಉನ್ನಾವ್, ಕೌಲಾಲಂಪುರ ಮತ್ತು ಬೆಂಗಳೂರು ನಗರಗಳು ಹಂಚಿಕೊಂಡಿವೆ.

ಕಳೆದ 2008ರಿಂದ ಪುಣೆ, ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಪ್ರಾಣಿಗಳ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದರು. ಕೊಲ್ಕತ್ತಾ, ಹೌರ್ಹಾ, ದೆಹಲಿ, ಅಹಮದಾಬಾದ್ ಮತ್ತು ಪುಣೆಯಲ್ಲಿ ಅತ್ಯಾಚಾರ ಚಿತ್ರಗಳನ್ನು ವೀಕ್ಷಿಸುತ್ತಿದ್ದರು. ಉತ್ತರ ಪ್ರದೇಶದ ಸಣ್ಣ ನಗರವಾದ ಉನ್ನಾವ್‍ನಲ್ಲಿ ಹೆಚ್ಚಾಗಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

ಚೀನಾ, ರಷ್ಯಾ, ಉತ್ತರಕೊರಿಯಾ ಗೂಗಲ್ ಸರ್ಚ್‍ಅನ್ನು ಅತಿ ಮಿತವಾಗಿ ಬಳಸುತ್ತಾರೆ ಎಂದು ಗೂಢಲಿಪಿಶಾಸ್ತ್ರ ತಜ್ಞ ಅಜಿತ್ ಹಟ್ಟಿ ತಿಳಿಸಿದ್ದಾರೆ. ಗೂಗಲ್ ಬಗೆಗಿನ ಜ್ಞಾನದ ಕೊರತೆ ಹಾಗೂ ಭಾಷೆಯ ಸಮಸ್ಯೆ ಪರಿಣಾಮ ಅಶ್ಲೀಲ ಚಿತ್ರ ವೀಕ್ಷಣೆಗಷ್ಟೆ ಗೂಗಲ್ ಉಪಯೋಗಿಸುತ್ತಿದ್ದಾರೆ ಎಂಬುದು ಹಟ್ಟಿ ಅವರ ಅಭಿಪ್ರಾಯವಾಗಿದೆ.

Write A Comment