ಕರ್ನಾಟಕ

ಪಾಪ್ ಕಾರ್ನ್ ಚಿಕನ್

Pinterest LinkedIn Tumblr

pop-cornಪಾಪ್ ಕಾರ್ನ್ ಚಿಕನ್ ಗೆ ಬೇಕಾಗುವ ಪದಾರ್ಥಗಳು

ಬೋನ್ ಲೆಸ್ ಚಿಕನ್ -500 ಗ್ರಾಂ
ಕೆಂಪು ಮೆಣಸಿನಕಾಯಿ ಪುಡಿ- 2 ಟೀ ಸ್ಪೂನ್
ಮೆಣಸಿನ ಪುಡಿ- 1 ಟೀ ಸ್ಪೂನ್
ಉಪ್ಪು-ರುಚಿಗೆ ತಕ್ಕಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಅರಿಶಿನ ಪುಡಿ.
ಬ್ರೆಡ್ ಪುಡಿ-2 ಚಮಚ
ಮೊಟ್ಟೆ-1
ಗರಂ ಮಸಾಲಾ – 1 ಸ್ಪೂನ್
ಕಾರ್ನ್ ಪ್ಲೋರ್ ಅರ್ಧ ಕಪ್
ಕರಿಯಲು ಅಡುಗೆ ಎಣ್ಣೆ

ಮಾಡುವ ವಿಧಾನ

ಮೊದಲಿಗೆ ಬೋನ್ ಲೆಸ್ ಚಿಕನ್ ಅನ್ನು ಚೆನ್ನಾಗಿ ತೊಳೆದುಕೊಂಡು ನೀರನ್ನು ಬಸಿದುಕೊಳ್ಳಿ. ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿ.
ಅದಕ್ಕೆ ಉಪ್ಪು, ಮೆಣಸಿನಕಾಯಿ ಪುಡಿ, ಕರಿಮೆಣಸಿನ ಪುಡಿ, ಗರಂ ಮಸಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಬ್ರೆಡ್ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮಿಕ್ಸ್ ಮಾಡಿದ ನಂತರ 1ಅರ್ಧ ಗಂಟೆ ನೆನೆಯಲು ಬಿಡಿ. ಸ್ಟವ್ ಹಚ್ಚಿ ಎಣ್ಣೆ ಕಾಯಲು ಬಿಡಿ.
ನೆನೆದ ಚಿಕನ್ ಮಿಕ್ಸ್ ಅನ್ನು ಮೊದಲಿಗೆ ಮೊಟ್ಟೆಯ ಬಿಳಿಯ ಭಾಗದಲ್ಲಿ ಅದ್ದಿ ನಂತರ ಅದನ್ನು ಕಾರ್ನ್ ಫ್ಲೋರ್ ಗೆ ಅದ್ದಿ. ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬರುವವರೆಗೂ ಕರಿಯರಿ. ಟಮೊಟೊ ಸಾಸ್ ಜೊತೆ ಬಿಸಿಬಿಸಿಯಾದ ಪಾಪ್ ಕಾರ್ನ್ ಚಿಕನ್ ಸವಿಯಲು ಸಿದ್ದ.

Write A Comment