ಅಂತರಾಷ್ಟ್ರೀಯ

ಮಾನಸಿಕ ಅಸ್ವಸ್ಥರಿಗೂ ವಸತಿ ಸೌಲಭ್ಯ ಕಲ್ಪಿಸಬಾರದೇಕೆ?

Pinterest LinkedIn Tumblr

World-Mental-Health-Dayಬೆಂಗಳೂರಿನಲ್ಲಿರುವ ಎಸ್‍ಐಟಿಯುನಂಥ ಮಾನಸಿಕ ಚಿಕಿತ್ಸಾ ಸಂಸ್ಥೆಗಳನ್ನು ಎನ್‍ಜಿಒಗಳು ಗುರುತಿಸುವ, ಬೆಂಬಲಿಸುವ ಕೆಲಸ ಮಾಡಬೇಕು.

ಅ.10 ಮತ್ತೆ ಬಂದಿದೆ. ಮತ್ತೊಂದು ವಿಶ್ವ ಮಾನಸಿಕ ಆರೋಗ್ಯ ದಿನ ಎದುರು ನಿಂತಿದೆ. ಪ್ರತಿ ವರ್ಷದಂತೆ ಮಾನಸಿಕ ಆರೋಗ್ಯದ ವಿಚಾರದಲ್ಲಿ ಯಾವುದೇ ಮಹತ್ವದ ಬದಲಾವಣೆಯಿಲ್ಲದೆ ಈ ವರ್ಷವೂ ಕಳೆದುಹೋಗುತ್ತದೆ.

ಅ.10 ಅನ್ನು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸುವ ಹಿಂದಿನ ಉದ್ದೇಶ ಜಾಗೃತಿ ಮೂಡಿಸುವುದು. ಆದರಿದು ಪರಿಸ್ಥಿತಿಯ ಭವಿಷ್ಯದ ಹಾದಿಯನ್ನು ವಿಶ್ಲೇಷಿಸಬೇಕಾದ ದಿನ. ನಗರದ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ನಾವಿನ್ನೂ 19ನೇ ಶತಮಾನದಲ್ಲೇ ಜೀವಿಸುತ್ತಿದ್ದೇವೆ. ಮಾನಸಿಕ ಆರೋಗ್ಯ ಚಿಕಿತ್ಸೆಗೆ ಸಂಬಂಧಿಸಿ ನೋಡುವುದಾದರೆ ನಮ್ಮಲ್ಲಿ ಹಣಕಾಸು ಕೊರತೆ ಇಲ್ಲ. ಆದರೆ, ಹಣ ವಿನಿಯೋಗಕ್ಕೆ ಸಂಬಂಧಿಸಿದ ನಿಯಮಾವಳಿಗಳು ಜಟಿಲವಾಗಿರುವ ಹಿನ್ನೆಲೆ ಯಲ್ಲಿ ಸದ್ವಿನಿಯೋಗ ಆಗುತ್ತಿಲ್ಲ.

ಆದರೆ, ಸೂಕ್ತ ರೀತಿಯಲ್ಲಿ ಪ್ರಸ್ತಾವಿಸಿದರೆ ಸಂಬಂಧಪಟ್ಟ ಇಲಾಖೆ ನೆರವಿಗೆ ಬರಲಿದೆ ಎಂಬುದು ನನ್ನ ವಿಶ್ವಾಸ. ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕವೇ ನಾಯಕ. ಇನ್ನು ಬೆಂಗಳೂರು ಮಾನಸಿಕ ಆರೋಗ್ಯ ಕ್ಷೇತ್ರದ ಕಾಶಿ. ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಎಸ್‍ಐಟಿಯುನಲ್ಲಿ ಅತ್ಯುತ್ತಮ ವೃತ್ತಿಪರ ಚಿಕಿತ್ಸಾ ತಂಡ ಇದೆ ಎಂದು ಹೇಳಲು ನಾನು ಖುಷಿಪಡುತ್ತೇನೆ. ಮಾನಸಿಕ ಆರೋಗ್ಯದ ವಿಚಾರ ಬಂದಾಗ ಸರ್ಕಾರದ ಪಾತ್ರವನ್ನು ಆಗಾಗ ದೂರುತ್ತೇವೆ. ಆದರೆ, ಇದೊಂದು ಸರ್ಕಾರಿ ಸಾಮುದಾಯಿಕ ಪ್ರಯತ್ನ. ಇಂಥ ಒಳ್ಳೆಯ ಪ್ರಯತ್ನವನ್ನು ಎನ್‍ಜಿಒಗಳು ಗುರುತಿಸಿ, ಬೆಂಬಲಿಸಬೇಕೆನ್ನುವುದು ನನ್ನ ಆಶಯ.

ರೆಹಬ್ ಅಂದರೆ ಸಮಾಜವನ್ನು ಮತ್ತೆ ಸೇರುವ ಅರ್ಥಪೂರ್ಣ ಚೇತರಿಕೆ. ಆದರೆ, ಭ್ರಮಿತ ಸಮಾಜಕ್ಕೆ ಮರುಸೇರ್ಪಡೆಗೊಳ್ಳಲು ಯಾರಾದ ರೂ ಬಯಸುತ್ತಾರಾ? ನಗರೀಕರಣದತ್ತ ಹೊರಟಿ ರುವ ಆಧುನಿಕ ಭಾರತವು ಬೆಂಗಳೂರಿನಲ್ಲೂ ಮಾ್ಯನ್‍ಹಟನ್ ರೀತಿಯಲ್ಲಿ ಬದುಕುತಿದ್ದೇವೆಂದು ಭಾವಿಸಲು ಇಷ್ಟಪಡುತ್ತದೆ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ‘ಎದ್ದು ನಿಲ್ಲಿ, ಏಳಿ, ಎದ್ದೇಳಿ ಮತ್ತು ಗುರಿ ಮುಟ್ಟುವವರೆಗೆ ಮುನ್ನಡೆಯಿರಿ” ಎಂದು. ಆದರೆ, ಇಂಗ್ಲಿಷ್ ಮಾತನಾಡುವ ಪಾಶ್ಚಿ ಮಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ನಗರದ ಜನ ಮಾತ್ರ ಈ ಹೇಳಿಕೆಗೆ ಈ ರೀತಿ ಉತ್ತರ ನೀಡುತ್ತಾರೆ. ‘ಏಳಿ, ಎದ್ದೇಳಿ ಮತ್ತು ಮಾಲ್ ತಲುಪುವವರೆಗೆ ಮುನ್ನಡೆಯಿರಿ”. ನಮ್ಮ ಪ್ರಧಾನಿ ನಮೋ ಅವರು Make in India ಎಂದು ಹೇಳುತ್ತಾರೆ. ಇದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ, ದುರದೃಷ್ಟವಶಾತ್ ಇತ್ತೀಚೆಗಿನ ಮನೋವೈಕಲ್ಯ ಸರ್ವೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಅಧ್ಯಯನ 2020ರ ವೇಳೆಗೆ ಭಾರತದಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳುತ್ತಿದೆ.

ಅ.2 ಗಾಂಧಿ ಜಯಂತಿ ಎನ್ನುವುದು ಬಹುತೇಕರಿಗೆ ಗೊತ್ತು. ಇದು ಮಹತ್ಮಾ Made ಇಂಡಿಯಾ. ಭಾರತವು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದೆ ಎಂದು ಅವರು ಹೇಳಿದ್ದು ಇವತ್ತಿಗೂ ಸತ್ಯ. ಇದೇ ಕಾರಣಕ್ಕೆ ಸರಳ ಜೀವ, ಉನ್ನತ ಚಿಂತನೆ ಎನ್ನುವ ಅವರ ಚಿಂತನೆಗೆ ಈಗಲೂ ಬೆಲೆ ಇದೆ. ಆದರೆ, ಅವರ ಭಾರತದ ಕುರಿತ ಕಲ್ಪನೆ ಮಾತ್ರ ಈಗ ಬದಲಾಗಿದೆ. ಆಧುನಿಕ ಭಾರತೀಯ ರು ಈಗ ಮಾಲ್ ಸಂಸ್ಕೃತಿಯಲ್ಲಿ ಬದುಕುತ್ತಿದ್ದಾರೆ. ಉಳಿದವರೆಲ್ಲರು ಗಾಂಧೀಜಿ ಅವರು ಮಾತನಾಡುತ್ತಿದ್ದ ಭಾರತದಲ್ಲಿ ಜೀವಿಸುತ್ತಿದ್ದಾರೆ. ಮೋಹನ್ ಭಾಗವತ್ ಹೇಳುವುದು ನಿಜ. ಇಂಗ್ಲೀಷ್‍ನಲ್ಲಿ ಮಾತನಾಡುತ್ತಿದ್ದೇವೆ ಅಂದಾಕ್ಷಣ ನಮ್ಮ ವಂಶವಾಹಿನಿಯೇನೂ ಬದಲಾಗಲ್ಲ. ಭಾರತದಲ್ಲಿ ಪುನರ್‍ವಸತಿ ಕುರಿತು ಮೊದಲು ಮಾತನಾಡಿದ ವ್ಯಕ್ತಿಯೆಂದರೆ ಅದು ಬಾಪು. ಗ್ರಾಮೀಣ ಪ್ರದೇಶಗಳನ್ನು ಸ್ವಾವಲಂಬಿ ಮಾಡಬೇಕೆನ್ನುವ ಅವರ ಕಲ್ಪನೆ ಪ್ರಗತಿಯ ನೀಲನಕ್ಷೆ. ಇದೇ ಕಾರಣಕ್ಕೆ ಪಾಶ್ಚಿಮಾತ್ಯ ರಾಜಕೀಯದ ಕುರಿತು ನಡೆಸುವ ಚರ್ಚೆ ವೇಳೆ ಶೂಮಾಕರ್ ಅವರ `ಸ್ಮಾಲ್ ಈಸ್ ಬ್ಯೂಟಿಫುಲ್’ ಹೆಚ್ಚು ಪ್ರಸ್ತುತ–ವಾಗುತ್ತದೆ. ಅದು ಏನು ಹೇಳುತ್ತದೆ ಎನ್ನುವುದನ್ನು ಈ ಜಾಹೀರಾತು ಸಾಲು ಓದಿ ತಿಳಿದುಕೊಳ್ಳಿ- ಯೇ ದಿಲ್ ಮಾಂಗೇ ಮೋರ್’ ಈಗ `ದಿಮಾಗ್ ಕೀ ಬತ್ತಿ ಜಲಾ ದೇ’ಗೆ ಬದಲಾಗಿದೆ. ಅಂದರೆ ಜ್ಞಾನಾಧಾರಿತ ಅರ್ಥವ್ಯವಸ್ಥೆ. ಫ್ರಾಂಕ್ ಸಿಂತಾರಾ ಸಂಗ್ ಹೇಳಿದಂತೆ, ನಾವು ನಮ್ಮದೇ ಮಾರ್ಗದಲ್ಲಿ ನಡೆಯಬೇಕು ಅಥವಾ ಪಾಶ್ಚಿಮಾತ್ಯರ ದಾರಿಯಲ್ಲಿ ಸಾಗಬೇಕು. ಹಾಗಿದ್ದರೆ ನಮ್ಮ ದಾರಿ ಯಾವುದಾಗಬೇಕು? ಮಾನಸಿಕ ಅಸ್ವಸ್ಥರನ್ನು ಉತ್ತಮ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ನಾಗರಿಕ ಸೌಲಭ್ಯಗಳಿರುವ ಯೋಜಿತ ಲೇಔಟ್ ಗಳ ಅರೆಸ್ವಾಯತ್ತ ವಸತಿ ವ್ಯವಸ್ಥೆಯಲ್ಲಿಡಬೇಕು. ಜತೆಗೆ, ವೃತ್ತಿಪರ ಆರೋಗ್ಯ ಸೇವೆಗಳು ಸಿಗುವಂತಿರಬೇಕು. ಸರ್ಕಾರ ಏಡ್ಸ್‍ಗೆ ತುತ್ತಾದವರಿಗೆ ವಸತಿ ಸೌಲಭ್ಯ ಕಲ್ಪಿಸುತ್ತದೆ. ಹಾಗಿದ್ದ ಮೇಲೆ ಮಾನಸಿಕ ಅಸ್ವಸ್ಥರಿಗೂ ಯಾಕೆ ಆ ಸೌಲಭ್ಯ ಕಲ್ಪಿಸಬಾರದು?
– ಡಾ ಲಕ್ಷ್ಮಣ್ ರಂಗನಾಥನ್

Write A Comment