ಬೆಂಗಳೂರು, ಅ. 6: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸಾ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪ್ರತಿಯೊಬ್ಬರೂ ಒತ್ತಡರಹಿತ ಜೀವನ ನಡೆಸಬಹುದು ಎಂದು ಗಾಂಧೀಜಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಅಭಿಪ್ರಾಯಪಟ್ಟರು.
ಮಹಾತ್ಮಗಾಂಧಿ ಅವರು ನಗರದ ಸರಕಾರಿ ಕಲಾ ಕಾಲೇಜಿಗೆ ಭೇಟಿ ನೀಡಿ 100 ವರ್ಷ ಪೂರೈಸಿದ ಅಂಗವಾಗಿ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ಮರಣ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಇನ್ನೊಬ್ಬರ ಮೇಲೆ ಹಲ್ಲೆ ಮಾಡುವುದು ಮಾತ್ರ ಹಿಂಸೆಯಲ್ಲ, ಬದಲಾಗಿ ಇನ್ನೊಬ್ಬರ ಮೇಲೆ ದ್ವೇಷ ಹಾಗೂ ಅಸೂಯೆ ಪಡುವುದು ಹಿಂಸೆಯೇ ಎಂದು ಗಾಂಧಿ ನಂಬಿದ್ದರು. ಬಾಪೂಜಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದು ಕಷ್ಟದ ಕೆಲಸವೇನೂ ಅಲ್ಲ. ಆದರೆ, ಅವರ ಅಹಿಂಸಾ ಪರಿಕಲ್ಪನೆ ಬಹಳ ಕಠಿಣವಾಗಿ ರುತ್ತದೆ ಎಂದು ನುಡಿದರು.
ಇನ್ನೊಬ್ಬರನ್ನು ದ್ವೇಷಿಸುವು ದರಿಂದ ಅವರ ಮೇಲೆ ಕೋಪಿಸಿ ಕೊಳ್ಳುವುದರಿಂದ ನಾವು ಸಂತೋಷ ದಿಂದ ಇರಲು ಸಾಧ್ಯ ವಾಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯ ಮಾರ್ಗಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಡಾ.ಸಂತೋಷ್ ಹೆಗ್ಡೆ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಪ್ರಜಾಪ್ರಭುತ್ವದ ನಾಲ್ಕು ಅಂಗಗಳು ತಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ದೂರಿದರು.
ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗಗಳಿಂದು ಭ್ರಷ್ಟಾ ಚಾರದಿಂದ ಹೊರತಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಜನರಲ್ಲಿ ಅತಿ ಯಾಸೆ ಮತ್ತು ಮಾನವೀಯತೆ ಮರೆಯಾಗುತ್ತಿರುವುದು ಎಂದು ವಿಷಾದಿಸಿದರು.
ಸಮಾಜದಲ್ಲಿ ತೃಪ್ತಿ ಮತ್ತು ಮಾನವೀಯತೆ ಕಡಿಮೆಯಾಗುತ್ತಿರುವು ದರಿಂದ ಎಲ್ಲ್ಲ ಕ್ಷೇತ್ರಗಳು ಇಂದು ಕಲು ಷಿತಗೊಂಡಿವೆ. ಅವರಿಗೆ ಬೇಕಾದ ಸೌಲಭ್ಯಗಳಿದ್ದರೂ ಮನುಷ್ಯನಿಗೆ ತೃಪ್ತಿ ಎಂಬುದಿಲ್ಲ ಎಂದ ಅವರು, ಕೆಲವೊಂದು ಪ್ರಕರಣಗಳಲ್ಲಿ ತಾವು ಕಂಡ ಹಲವು ಅಮಾನವೀಯ ಘಟನೆ ಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ನಮ್ಮ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ನಾವು ಆಯ್ಕೆ ಮಾಡಿ ಕಳುಹಿಸುತ್ತಿರುವ ಸಂಸದರು ಸೂಕ್ತ ಶೈಕ್ಷಣಿಕ ಅರ್ಹತೆಯನ್ನು ಹೊಂದಿಲ್ಲದಿರುವುದರಿಂದ ಅವರು ತಮ್ಮ ಸಮಸ್ಯೆಗಳನ್ನು ಅಲ್ಲಿ ಚರ್ಚಿಸುತ್ತಿಲ್ಲ ಎಂದು ಅವರು ಟೀಕಿಸಿದರು.
ದೇಶದಲ್ಲಿ ನಡೆದ ಹಲವಾರು ಹಗರಣಗಳಲ್ಲಿ ಸರಕಾರಿ ಅಧಿಕಾರಿಗಳು ಪಾಲ್ಗೊಂಡಿ ರುತ್ತಾರೆ, ಇದರಿಂದ ಜನರು ಕಾರ್ಯಾಂಗದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ನಾಲ್ಕನೆ ಅಂಗವಾದ ಮಾಧ್ಯಮ ಕಾಸಿಗಾಗಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಂ.ವೆಂಕಟಶಾಮಿರೆಡ್ಡಿ, ಉದ್ಯಮಿ ಎಚ್.ರಾಚಪ್ಪ, ಉಪನ್ಯಾಸಕರಾದ ಡಾ.ಟಿ.ಎಂ.ಮಂಜುನಾಥ್, ಪ್ರೊ.ಪಿ.ಜಿ.ಕರುಣಾಕರ ಬಾಬು ಉಪಸ್ಥಿತರಿದ್ದರು.
ಆರೋಪಿಗಳಿಗೆ ಶಿಕ್ಷೆ ಆಗುವುದು ಯಾವಾಗ?
ಒಂದು ಪ್ರಕರಣ ಕೆಳಹಂತದ ನ್ಯಾಯಾಲಯದಲ್ಲಿ 15-20 ವರ್ಷಗಳು ವಿಚಾರಣೆ ನಡೆಯು ತ್ತದೆ. ನಂತರ ಹೈಕೋರ್ಟ್, ಸುಪ್ರೀಂಕೋರ್ಟ್‌ಗೆ ಹೋಗುತ್ತದೆ. ಅಲ್ಲಿ ಮತ್ತೆ ಒಂದಷ್ಟು ವರ್ಷಗಳು ವಿಚಾರಣೆ ನಡೆಯುತ್ತದೆ. ಹೀಗಿರು ವಾಗ ಪ್ರಕರಣದಲ್ಲಿ ಆರೋಪಿ ಗಳಿಗೆ ಶಿಕ್ಷೆಯಾಗುವುದು ಯಾವಾಗ.
ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ
ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ತತ್ವಗಳು 21ನೆ ಶತಮಾನದಲ್ಲಿಯೂ ಪ್ರಸ್ತುತತೆಯನ್ನು ಹೊಂದಿದ್ದು, ಕಲುಷಿತಗೊಂಡಿರುವ ಸಮಾ ಜಕ್ಕೆ ಅವರ ತತ್ವಗಳು ಅನಿ ವಾರ್ಯವಾಗಿವೆ. ಕೆಲವರು ವಸ್ತ್ರಧಾರಣೆಯಲ್ಲಿ ಗಾಂಧಿವಾದಿ ಗಳಾಗಿರುತ್ತಾರೆ. ಆದರೆ, ಅವರು ಹೃದಯದಲ್ಲಿ ಗಾಂಧೀಜಿಯವರ ತತ್ವಗಳನ್ನು ಪಾಲಿಸುವುದಿಲ್ಲ.
ಸುಮಿತ್ರಾ ಗಾಂಧಿ ಕುಲಕರ್ಣಿ, ಗಾಂಧೀಜಿಯವರ ಮೊಮ್ಮಗಳು.