ಕರ್ನಾಟಕ

‘ಪಡಕಡಲ ತಡೆಯಲ್ಲಿ’ ಕೃತಿ ಲೋಕಾರ್ಪಣೆ: ರೈತರ ಆತ್ಮಹತ್ಯೆಗಳಿಗೆ ಕಾರಣ ಹಣ: ಡಾ.ಸಿದ್ದಲಿಂಗಯ್ಯ

Pinterest LinkedIn Tumblr

ekathala-fiಬೆಂಗಳೂರು, ಅ. 6: ಗ್ರಾಮೀಣ ಪ್ರದೇಶದಲ್ಲಿ ಹಣದ ಪ್ರಭಾವ ಹೆಚ್ಚಾಗುತ್ತಿರುವ ಪರಿಣಾಮವಾಗಿ ಮನುಷ್ಯ ಸಂಬಂಧಗಳು ತೀವ್ರವಾಗಿ ಹದಗೆಟ್ಟಿವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಶ್ರೀ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆ ಹಮ್ಮಿಕೊಂಡಿದ್ದ ಡಾ.ಪಾರಂಪಳ್ಳಿ ವಿಷ್ಣುಮೂರ್ತಿ ಐತಾಳರ ಚೊಚ್ಚಲ ಕಾದಂಬರಿಯಾದ ‘ಪಡಕಡಲ ತಡೆಯಲ್ಲಿ’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಹಳ್ಳಿಗಳಲ್ಲಿ ಹಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದರಿಂದ ಜನರ ನಡುವಿನ ಸಂಬಂಧಗಳಲ್ಲಿ ಬಿರುಕು ಸೃಷ್ಟಿಯಾಗುತ್ತಿದೆ. ಹಣದ ಬಯಕೆಯಲ್ಲಿ ಮಾನವೀ ು ವೌಲ್ಯಗಳು ಕೊಚ್ಚಿಹೋಗುತ್ತಿವೆ ಎಂದು ವಿಷಾದಿಸಿದ ಅವರು, ರೈತರ ಸಂಕಷ್ಟ ಮತ್ತು ಆತ್ಮಹತ್ಯೆ ಪ್ರಸಂಗಗಳು ಹಣದ ಪ್ರಭಾವದಿಂದಲೇ ಉದ್ಭವಿಸುತ್ತಿವೆ. ಪ್ರಕೃತಿ ನಿಯಮದಂತೆ ಜನರ ಪಾತ್ರಗಳು, ಆಚರಣೆಗಳು, ವೌಲ್ಯಗಳು ಕಾಲಕ್ರಮೇಣ ಬದಲಾಗುತ್ತಿವೆ ಎಂದು ತಿಳಿಸಿದರು.

ಕೃತಿ ಕುರಿತು ಮಾತನಾಡಿದ ಸಿದ್ದಲಿಂಗಯ್ಯ, ಲೇಖಕರು ಕೃಷಿ ಜೀವನದ ಬಗ್ಗೆ ಚಿತ್ರಿಸಿದ್ದಾರೆ. ಕೃತಿಯಲ್ಲಿ ಜನಪದ, ಸಮಾಜಶಾಸ್ತ್ರದ ಕುರಿತು ಉಲ್ಲೇಖಿಸುವ ಜತೆಗೆ ಧಾರ್ಮಿಕ ವಿಚಾರಗಳ ಬಗ್ಗೆ ವಿವರಣೆ ನೀಡಿದ್ದಾರೆ ಎಂದ ಅವರು, ಕೃತಿಯು ಸಾಹಿತ್ಯಾಸಕ್ತರಿಗೆ ಭೂರೀ ಭೋಜನವನ್ನೇ ಉಣಬಡಿಸುತ್ತದೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ಲೇಖಕ ಡಾ. ಪಾರಂಪಳ್ಳಿ ವಿಷ್ಣುಮೂರ್ತಿ, ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ, ಪುಷ್ಪಲತಾ ಐತಾಳ್ ಮತ್ತಿತರರು ಭಾಗವಹಿಸಿದ್ದರು.

Write A Comment