ಕರ್ನಾಟಕ

ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಆಟೋದಲ್ಲೇ ಹೆರಿಗೆ : ಬದುಕುಳಿಯದ ಮಗು

Pinterest LinkedIn Tumblr

pragnetಕೊಳ್ಳೆಗಾಲ,ಅ.5- ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಮನೆಗೆ ತೆರಳುತ್ತಿದ್ದ  ಗರ್ಭಿಣಿಗೆ ಆಟೋದಲ್ಲಿ ಹೆರಿಗೆಯಾಗಿ ಮಗು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಕೌದಳ್ಳಿ ಗ್ರಾಮದ ಸಲ್ಮಾ ಬಾನು ಇಂದು ಬೆಳಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. ಆದರೆ ಅಲ್ಲಿ ವೈದ್ಯರೇ ಇರದಿದ್ದರಿಂದ ಮತ್ತೆ ಮನೆಗೆ ಆಟೋದಲ್ಲಿ ತೆರಳುತ್ತಿದ್ದಾಗ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಕೂಡಲೇ ಖಾಸಗಿ ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ಕರೆದೊಯ್ಯುತ್ತಿದ್ದಾಗ  ಮಾರ್ಗಮಧ್ಯೆದಲ್ಲಿ ಮಗು ಅಸುನೀಗಿದೆ.   ಈ ಘಟನೆಯಿಂದ ಆಕ್ರೋಶಗೊಂಡ ಸಂಬಂಧಿಕರು ಹಾಗೂ ಗ್ರಾಮಸ್ಥರು ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ.

Write A Comment