ಕರ್ನಾಟಕ

ಬೀದರ್‌ಗೂ ಬಂತು ರೈಲ್ವೆ ಎಟಿವಿಎಂ

Pinterest LinkedIn Tumblr

4BDR1Aಬೀದರ್‌: ಬೀದರ್‌ ರೈಲ್ವೆ ನಿಲ್ದಾಣದಲ್ಲಿ ಈಗ ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಸ್ವಯಂಚಾಲಿತ ಟಿಕೆಟ್‌ ನೀಡುವ ಯಂತ್ರ (ಎಟಿವಿಎಂ) ಅಳವಡಿಸಲಾಗಿದೆ. ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಎರಡು ಎಟಿವಿಎಂ ಸ್ಥಾಪನೆ ಮಾಡಲಾ ಗಿದ್ದು, ಪ್ರಯಾಣಿಕರು ಸುಲಭವಾಗಿ ಹಾಗೂ ತ್ವರಿತವಾಗಿ ಟಿಕೆಟ್‌ ಪಡೆದು ಕೊಳ್ಳಲು ಸಾಧ್ಯವಾಗಿದೆ.

ರೈಲ್ವೆ ಇಲಾಖೆ ಬಿಡುಗಡೆ ಮಾಡಿ ರುವ ಸ್ಮಾರ್ಟ್‌ ಕಾರ್ಡ್‌ ಬ್ಯಾಂಕ್‌ ಎಟಿ ಎಂಗೆ ಹೋಲುತ್ತದೆ. ನಿಲ್ದಾಣದ ಕೌಂಟ ರ್‌ನಲ್ಲಿ ಎಟಿವಿಎಂ ಕಾರ್ಡ್‌ ವಿತರಿಸಲಾ ಗುತ್ತಿದೆ. ಪ್ರಯಾಣಿಕರು ಸರ್ಕಾರದ ಮಾನ್ಯತೆ ಪಡೆದ ಭಾವಚಿತ್ರವಿರುವ ಯಾವುದೇ ಗುರುತಿನ ಚೀಟಿ ತೋರಿಸಿ ₹50 ಪಾವತಿಸಿದರೆ ಎಟಿವಿಎಂ ದೊರೆಯಲಿದೆ. ಇದರ ಜೊತೆಗೆ ₹ 20 ಬೋನಸ್‌ ಪ್ಯಾಕ್‌ ನೀಡಲಾಗುತ್ತದೆ. ಮೊಬೈಲ್‌ ಕರೆನ್ಸಿ ಮಾದರಿಯಲ್ಲಿ ಕೌಂಟರ್‌ನಲ್ಲಿಯೇ ಕನಿಷ್ಠ ₹50 ರಿಂದ ಗರಿಷ್ಠ ₹5 ಸಾವಿರ ವರೆಗೆ  ರಿಚಾರ್ಜ್‌್ ಮಾಡಿಸಬಹುದು.

ನಿತ್ಯ ಪ್ರಯಾಣ ಮಾಡುವವರಿಗೆ ಇದು ಹೆಚ್ಚು ಅನುಕೂಲವಾಗಿದೆ.  ಪ್ರಯಾಣಿಕರು ₹ 100 ರಿಚಾರ್ಜ್‌ ಮಾಡಿ ದರೆ, ಕಾರ್ಡ್‌ನಲ್ಲಿ  ₹105 ಮೊತ್ತ ದಾಖ ಲಾಗುತ್ತದೆ. ಶೇ 5 ಬೋನಸ್‌ ದೊರೆ ಯು ತ್ತದೆ.  ₹ 500 ರಿಚಾರ್ಜ್‌ ಮಾಡಿಸಿದರೆ ₹25 ಬೋನಸ್‌ ದೊರೆ ಯಲಿದೆ.

ಬೀದರ್‌ ರೈಲ್ವೆ ನಿಲ್ದಾಣದಲ್ಲಿ ಅನಕ್ಷರಸ್ಥರು ಹೆಚ್ಚು ಬರುವು ದರಿಂದ ನಿವೃತ್ತ ಸಿಬ್ಬಂದಿ ಯೊಬ್ಬರನ್ನು ಎಟಿವಿಎಂ ಬಳಿ ಸಹಾಯಕ್ಕೆ ನಿಯೋ ಜಿಸಲು ಉದ್ದೇಶಿಸಲಾಗಿದೆ. ನಿವೃತ್ತ ಸಿಬ್ಬಂದಿಗೆ ವೇತನ ಬದಲು ಟಿಕೆಟ್‌ ಕೊಡುವ ಮೊತ್ತದ ಮೇಲೆ  ಶೇ 5ರಷ್ಟು ಕಮಿ ಷನ್‌ ಕೊಡ ಲಾಗು ವುದು ಎಂದು ದಕ್ಷಿಣ ಮಧ್ಯೆ ರೈಲ್ವೆಯ ಬೀದರ್‌ ನಿಲ್ದಾ ಣದ ವಾಣಿಜ್ಯ ಮೇಲ್ವಿ ಚಾರಕ ಎ.ರಮೇಶ  ತಿಳಿ ಸಿದರು.

ಪ್ರಯಾಣದ ಟಿಕೆಟ್‌ ಗಳು, ಪ್ಲಾಟ್‌ ಫಾರಂ ಟಿಕೆಟ್‌ಗಳನ್ನು ಸ್ಮಾರ್ಟ್‌ ಕಾರ್ಡ್‌ ಮೂಲಕ ಪಡೆಯಬ ಹುದು. ಅಲ್ಲದೆ, ಮಾಸಿಕ ಪಾಸ್‌ ನವೀಕರಣ ಗೊಳಿಸುವ ಸೌಲಭ್ಯವೂ ಇದು ಒಳಗೊಂಡಿರುತ್ತದೆ. ಪ್ರಯಾಣಿ ಕರು ಸಿಬ್ಬಂದಿ ಬರುವಿಕೆಗಾಗಿ ಕಾಯುವ ಅಗತ್ಯವಿಲ್ಲ. ಯಾವುದೇ ಅವಧಿಯಲ್ಲೂ ಎಟಿವಿಎಂ ಮೂಲಕ ಟಿಕೆಟ್‌ ಖರೀದಿಸಬಹುದು ಎಂದು ಹೇಳಿದರು.

ಸ್ಮಾರ್ಟ್‌ಕಾರ್ಡ್‌ ಬಳಕೆ ಸುಲಭ: ಎಟಿವಿಎಂ ಬಳಕೆ ಸುಲಭ. ರೈಲ್ವೆಯಲ್ಲಿ ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಿದೆ. ಎಟಿವಿಎಂ ಕಾರ್ಡ್‌ನ  ಝರಾಕ್ಸ್‌ ಪ್ರತಿ ಇಟ್ಟು ಕೊಂಡರೆ ಒಳ್ಳೆಯದು. ಸಂಖ್ಯೆ ನೆನಪಿಟ್ಟು ಕೊಂಡರೂ ಉತ್ತಮ. ಕಾರ್ಡ್‌ ಕಳೆದು ಹೋದ ಸಂದರ್ಭದಲ್ಲಿ ಸಂಖ್ಯೆಯನ್ನು ನೀಡಿ ಬೇರೆ ಕಾರ್ಡ್‌ ಪಡೆಯಬಹುದು.

ಎಟಿವಿಎಂ ಎದುರಿನ ಸ್ಕ್ರೀನ್‌ ಎದುರು ಕಾರ್ಡ್‌ ಹಿಡಿದರೆ ಸಾಕು ಮಾಹಿತಿ ಪರದೆ ತೆರೆದುಕೊಳ್ಳುತ್ತದೆ. ಕನ್ನಡ, ಇಂಗ್ಲಿಷ್‌, ಹಿಂದಿಯಲ್ಲಿ ವ್ಯವಹರಿ ಸಬಹುದು. ನಮಗೆ ಗೊತ್ತಿರುವ ಭಾಷೆ ಯನ್ನು ಆಯ್ಕೆ ಮಾಡಿಕೊಂಡು ಎಲ್ಲಿಂದ – ಎಲ್ಲಿಗೆ ಮತ್ತು ಪ್ರಯಾಣಿಕರ ಸಂಖ್ಯೆ ನಮೂದಿಸಬೇಕು. ನಂತರ, ವಯಸ್ಕರು ಮತ್ತು ಮಕ್ಕಳ ಸಂಖ್ಯೆಯನ್ನು ಭರ್ತಿ ಮಾಡಬೇಕು. ಕೊನೆಯಲ್ಲಿ ‘ಪ್ರಿಂಟ್‌’ ಬಟನ್‌ ಒತ್ತಿದಾಗ ಟಿಕೆಟ್‌ ಬರುತ್ತದೆ.

ಒಂದು ಬಾರಿ ಕಾರ್ಡ್‌ ಹಾಕಿದಾಗ ಗರಿಷ್ಠ ಪ್ರಯಾಣಿಕರ ಸಂಖ್ಯೆ 4 ಎಂದು ಮಾತ್ರ ನಮೂದಿಸಬೇಕು. ಅಂದರೆ ಒಂದು ಬಾರಿ ನಾಲ್ಕು ಜನರ ಟಿಕೆಟ್‌ ಪಡೆದುಕೊಳ್ಳಬಹುದಾಗಿದೆ.  ಐದನೇ ವ್ಯಕ್ತಿಗೆ ಟಿಕೆಟ್‌ ಖರೀದಿಸಲು ಮತ್ತೊಮ್ಮೆ ಕಾರ್ಡ್‌ ಬಳಸಬೇಕಾಗುತ್ತದೆ. ಎಟಿವಿಎಂ ಈಗಷ್ಟೆ ಬಂದಿದೆ. ಪ್ರಯಾಣಿಕರಿಗೆ ಅಷ್ಟಾಗಿ ಪರಿಚಿತವಾಗಿಲ್ಲ. ಬಳಕೆ ಆರಂಭವಾದರೆ ಪ್ರತಿಯೊಬ್ಬರಿಗೆ ತ್ವರಿತ ಸೇವೆ ಲಭಿಸಲಿದೆ. ಸಿಬ್ಬಂದಿ ಕೊರತೆ ನೀಗಲಿದೆ ಎಂದು ರಮೇಶ ತಿಳಿಸಿದರು.

Write A Comment