ಕರ್ನಾಟಕ

ಸರ್ಕಾರಕ್ಕೂ ಅರಮನೆ ಆಚರಣೆಗೂ ಯಾವುದೇ ಸಂಬಂಧ ಇಲ್ಲ, ಪರಂಪರೆ ಉಳಿಸಲಷ್ಟೇ ಸರ್ಕಾರ ಜಂಬೂಸವಾರಿ : ಸಿಎಂ

Pinterest LinkedIn Tumblr

jambuಸಾಗರ(ಶಿವಮೊಗ್ಗ), ಅ.3-ಸರ್ಕಾರಕ್ಕೂ ಅರಮನೆ ಆಚರಣೆಗೂ ಯಾವುದೇ ಸಂಬಂಧ ಇಲ್ಲ. ಸರ್ಕಾರ ನಡೆಸುವ ದಸರಾ ಧಾರ್ಮಿಕ ಆಚರಣೆಯಲ್ಲಿ ಪರಂಪರೆ ಉಳಿಸಲು ಸರ್ಕಾರ ಜಂಬೂಸವಾರಿ ನಡೆಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಇಂದು ಸುದ್ದಿಗಾರರ ಜತೆ  ಮಾತನಡಿದ ಅವರು, ಮೂಢನಂಬಿಕೆ, ಜ್ಯೋತಿಷ್ಯಗಳಲ್ಲಿ ನನಗೆ ಯಾವುದೇ ನಂಬಿಕೆಯೂ ಇಲ್ಲ ಎಂದು ಹೇಳಿದರು. ಜಂಬೂಸವಾರಿಯನ್ನು ಸರ್ಕಾರ ಒಂದು ದಿನ  ಮುಂಚೆ ನಡೆಸಲು ನಿರ್ಧರಿಸಿರುವುದಕ್ಕೆ ಅರಸು ಮಹಾಸಭಾ ಹಾಗೂ ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್ ಅವರು ತೀವ್ರವಾಗಿ ವಿರೋಧಿಸಿರುವುದರ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು, ಅರಮನೆಯ ಯಾವುದೇ ಸಂಪ್ರದಾಯಗಳ ಆಚರಣೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದರು.

ಸ್ವಾಮಿ ಅತ್ಯಾಚಾರ ಆರೋಪ:
ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ  ಮುಖ್ಯಮಂತ್ರಿ, ಈ ಪ್ರಕರಣದಲ್ಲಿ ಯಾವುದೇ ತಾರತಮ್ಯವನ್ನೂ ಸರ್ಕಾರ ಮಾಡಿಲ್ಲ ಎಂದು ಪುನರುಚ್ಚರಿಸಿದರು. ಸಿಐಡಿ ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ನಡೆಸಿ ವಾಸ್ತವ ಸ್ಥಿತಿಯ ಬಗ್ಗೆ ಕಂಡುಕೊಂಡಿರುವ ದಾರಿಯಲ್ಲೇ ವರದಿ ತಯಾರಿಸಲಾಗಿದೆ. ಈಗಾಗಲೇ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು. ಸ್ವಾಮೀಜಿ ಅತ್ಯಾಚಾರ ಆರೋಪ ಕುರಿತಂತೆ ರಾಜ್ಯಪಾಲರು ವರದಿ ಕೇಳಿದ್ದಾರೆ. ಅದಕ್ಕೆ ಸರ್ಕಾರದ ವತಿಯಿಂದ ಈಗಾಗಲೇ ಸಂಪೂರ್ಣ ಮಾಹಿತಿಗಳನ್ನೊಳಗೊಂಡ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಈ ಪ್ರಕರಣದಲ್ಲಿ ಯಾವ ಕಾರಣಕ್ಕೂ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ಅದರ ಕೆಲಸ ಮಾಡುತ್ತಿದೆ. ಶೀಘ್ರವೇ ಸತ್ಯ ಹೊರಬೀಳಲಿದೆ ಎಂಬ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದರು.

Write A Comment