ಬೆಂಗಳೂರು, ಅ.1- ವಿದ್ಯುತ್ ಕ್ಷಾಮದ ಹಿನ್ನೆಲೆ ಯಲ್ಲಿ ಈಗಿರುವ ಲೋಡ್ ಶೆಡ್ಡಿಂಗ್ ಪ್ರಮಾಣವನ್ನು ಹೆಚ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸ್ಥಿತಿಗನುಗುಣವಾಗಿ ಲೋಡ್ ಶೆಡ್ಡಿಂಗ್ ಅವಧಿಯನ್ನು ಪರಿಷ್ಕರಿಸಲಾಗುವುದು ಎಂದ ಅವರು, ವಿದ್ಯುತ್ ಕ್ಷಾಮದಿಂದ ರಾಜ್ಯವನ್ನು ಮುಕ್ತಗೊಳಿಸಲು ದೀರ್ಘಕಾಲೀನ ಯೋಜನೆಯನ್ನು ರೂಪಿಸಲಾಗುತ್ತದೆ. ಮುಂದಿನ ಹತ್ತು ವರ್ಷಗಳಲ್ಲಿ ವಿದ್ಯುತ್ ಬೇಡಿಕೆ ದುಪ್ಪಟ್ಟಾಗಲಿದ್ದು, ಅಂದರೆ 22,200 ಮೆಗಾವ್ಯಾಟ್‌ಗೆ ಏರಿಕೆಯಾಗಲಿದೆ ಎಂದು ಹೇಳಿದರು.
ಈ ಸಂಬಂಧ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪವನಶಕ್ತಿ, ಜಲ ವಿದ್ಯುತ್, ಸೌರವಿದ್ಯುತ್ ಸೇರಿದಂತೆ ಯಾವ ಯಾವ ಮೂಲಗಳಿಂದ ವಿದ್ಯುತ್ ಪಡೆಯಬಹುದೆಂಬುದರ ಬಗ್ಗೆ ಸಮಾಲೋಚಿಸಿ ಕ್ರಮ ರೂಪಿಸ ಲಾಗುವುದು. ದೀರ್ಘಾ ವಧಿಯಲ್ಲಿ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಸಲಾಗುವುದು. ಮಧ್ಯಮಾವಧಿಯಲ್ಲಿ ಒಂದು ಸಾವಿರ ಮೆಗಾ ವ್ಯಾಟ್ ಹಾಗೂ 500 ಮೆಗಾ ವ್ಯಾಟ್ ಸೌರ ವಿದ್ಯುತ್ ಖರೀದಿ ಮಾಡಲಾಗುವುದು. ಈ ಸಂಬಂಧ ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿ ಸಲಾಗುವುದು ಎಂದು ತಿಳಿಸಿದರು.
ಪ್ರಸ್ತುತ 7,700 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, 5,900 ಮೆಗಾ ವ್ಯಾಟ್‌ನಷ್ಟು ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪ್ರತಿದಿನ 1,800 ಮೆಗಾವ್ಯಾಟ್ ವಿದ್ಯುತ್ ಕೊರತೆಯಾಗುತ್ತಿದೆಯಲ್ಲದೆ, 1,100 ಮೆಗಾವ್ಯಾಟ್ ವಿದ್ಯುತ್ ಖರೀದಿಸ ಲಾಗುತ್ತಿದೆ ಎಂದು ಹೇಳಿದರು. ವಿದ್ಯುತ್ ಖರೀದಿಸಲು ವಿದ್ಯುತ್ ಕಂಪನಿಗಳಿಗೆ ಹಣಕಾಸಿನ ತೊಂದರೆ ಯಿಲ್ಲ. ಇಲಾಖೆಯಲ್ಲಿನ ಹುದ್ದೆಗಳ ಭರ್ತಿಗಾಗಿ ಒಂದು ಸಾವಿರ ಇಂಜಿನಿಯರಿಂಗ್, 10 ಸಾವಿರ ಲೈನ್‌ಮೆನ್‌ಗಳನ್ನು 4 ತಿಂಗಳ ಅವಧಿಯಲ್ಲಿ ನೇಮಿಸಿಕೊಳ್ಳಲಾಗುವುದು ಎಂದರು.
ವಿದ್ಯುತ್ ವರ್ಗಾವಣೆ, ಮಾರ್ಗ ನಿರ್ಮಾಣವನ್ನು 3 ಸಾವಿರ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳ ಲಾಗಿದ್ದು, ಪಾವಗಡದಲ್ಲಿ ಪ್ರಾದೇಶಿಕವಾಗಿ ಉದ್ದೇಶಿಸಿರುವ ಸೌರ ವಿದ್ಯುತ್ ಪಾರ್ಕ್ ಸ್ಥಾಪನೆ ಮಾದರಿಯಲ್ಲೇ ಇತರ ರಾಜ್ಯದಲ್ಲೂ ಅಳವಡಿಸಿಕೊಳ್ಳಬೇಕೆಂದು ಪ್ರಧಾನಿ ಮೋದಿಯವರು ತಿಳಿಸಿದ್ದಾರೆ. ರಾಜ್ಯದಲ್ಲಿ ಆವರಿಸಿರುವ ಬರ ಪರಿಸ್ಥಿತಿಗೆ ಶೇ.60ರಷ್ಟು ಕೊರತೆ ಉಂಟಾಗುವುದು ಎಂದರು. ವಿದ್ಯುತ್ ಖರೀದಿ ಅವ್ಯವಹಾರ ಕದನ ಸಮಿತಿಯ ಅವಧಿಯನ್ನು ವಿಸ್ತರಣೆ ಮಾಡುವಂತೆ ವಿಧಾನಸಭಾಧ್ಯಕ್ಷರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.