ಕರ್ನಾಟಕ

ಇನ್ನು ಮೂರೇ ವರ್ಷದಲ್ಲಿ ಬೆಂಗಳೂರು ಪವರ್ ಫುಲ್!

Pinterest LinkedIn Tumblr

electricityಬೆಂಗಳೂರು: ಅಂದುಕೊಂಡಂತೆಯೇ ನಡೆದರೆ ಇನ್ನು ಕೇವಲ ಮೂರೇ ವರ್ಷದಲ್ಲಿ ಬೆಂಗಳೂರಿಗರ ವಿದ್ಯುತ್ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ.

ಕಾರಣ ಬೆಂಗಳೂರಿನಲ್ಲೇ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಯಲಹಂಕದಲ್ಲಿ 102 ಎಕರೆ ಜಾಗವನ್ನು ನೋಡಿದೆ. ಇಂಧನ ಸಚಿವ ಡಿ.ಕೆ ಶಿವಕುಮಾರ್ ಯಲಹಂಕದ ಕೆಪಿಸಿಎಲ್ ನಲ್ಲಿ ಘಟಕದ ಜಾಗವನ್ನು ಶನಿವಾರ ಪರಿಶೀಲನೆ ನಡೆಸಿದರು. ವಿದ್ಯುತ್ ಕೊರತೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ, ಭವಿಷ್ಯದಲ್ಲಿ ಬೆಂಗಳೂರಿಗೆ ತುರ್ತು ಪರಿಸ್ಥಿತಿಯಲ್ಲಿ ವಿದ್ಯುತ್ ಪೂರೈಸಲು ಈ ಘಟಕ ಆರಂಭಿಸುತ್ತಿದೆ. 102 .33 ಎಕರೆ ಜಾಗದಲ್ಲಿ ಸ್ಥಾಪಿಸಲಿರುವ ಘಟಕಕ್ಕೆ ಮಾಸಾಂತ್ಯದಲ್ಲಿ ಶಂಕುಸ್ಥಾಪನೆ ನೆರವೇರಲಿದೆ. 30 ತಿಂಗಳಲ್ಲಿ ಅಂದರೆ 2018 ರ ಮಾರ್ಚ್ ವೇಳೆಗೆ ಘಟಕ ಕಾರ್ಯಾರಂಭ ಮಾಡಲಿದೆ.

370 ಮೇ.ವ್ಯಾಟ್: ರೂ.1 ,571 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಅನಿಲ ಆಧಾರಿತ ಘಟಕ 370 ಮೇ.ವ್ಯಾ ವಿದ್ಯುತ್ ಉತ್ಪಾದಿಸಲಿದೆ. ಇದೇ ಪ್ರಮಾಣದ ವಿದ್ಯುತ್ ಉತ್ಪಾದಿಸುವ ಎರಡನೇ ಹಂತದ ಘಟಕ ಮತ್ತೆ ಪ್ರಾರಂಭವಾಗಲಿದೆ. ಜಲಮಂಡಳಿಯ ಜಕ್ಕೂರು ತ್ಯಾಜ್ಯ ನೀರು ಶುದ್ಧೀಕರಣ ಘಟಕದಿಂದ 15 ಎಂ.ಎಲ್.ಡಿ  ನೀರು ಇದಕ್ಕೆ ಬಳಕೆಯಾಗಲಿದೆ. ಗೇಯ್ಲ್ ನೆಟ್ ವರ್ಕ್ ಸಂಸ್ಥೆ ಬಿಡದಿಯಲ್ಲಿ ಆರಂಭಿಸಿರುವ ಘಟಕಕ್ಕೆ ಪೈಪ್ ಲೈನ್ ಮೂಲಕ ಅನಿಲ ಪೂರೈಸುತ್ತಿದೆ. ಹೆಬ್ಬಾಳದ ಬಳಿ ಹಾದುಹೋಗಿರುವ ಒಂದು ಪೈಪ್ ಲೈನ್ ಗೆ ಸಂಪರ್ಕ ಕಲ್ಪಿಸಿ ಇಲ್ಲಿಗೂ ಅನಿಲ ಪೂರೈಸಲು ಮಾತುಕತೆ ನಡೆಸಲಾಗಿದೆ. ಘಟಕ ಆರಂಭಿಸುವ ಹೊಣೆ ಬಿಹೆಚ್.ಇ.ಎಲ್ ಗೆ ನೀಡಿದ್ದು ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

Write A Comment