ಕರ್ನಾಟಕ

ಕೆಎಸ್ಸಾರ್ಟಿಸಿಗೆ ರಾಷ್ಟ್ರೀಯ ಸ್ಮಾರ್ಟ್ ಗವರ್ನೆನ್ಸ್ ಪ್ರಶಸ್ತಿ

Pinterest LinkedIn Tumblr

KSRTC1_ಬೆಂಗಳೂರು, ಸೆ. 23: ಕೆಎಸ್ಸಾರ್ಟಿಸಿ ಹೊಸದಾಗಿ ಅನುಷ್ಠಾನಗೊಳಿಸಿರುವ ಮೂರು ಯೋಜನೆಗಳನ್ನು ಗುರುತಿಸಿ ಹೊಸದಿಲ್ಲಿ ಮೂಲದ ಇಂಡಿಯ ಹ್ಯಾಬಿಟಾಟ್ ಸೆಂಟರ್ 41ನೆ ರಾಷ್ಟ್ರೀಯ ಸ್ಮಾರ್ಟ್ ಗವರ್ನೆನ್ಸ್ ಪ್ರಶಸ್ತಿಯನ್ನು ಕೆಎಸ್ಸಾರ್ಟಿಸಿಗೆ ಪ್ರದಾನಿಸಿದೆ.

ನಿಗಮವು ಮಧ್ಯಮ-ಸಣ್ಣ ನಗರ ಹಾಗೂ ಪಟ್ಟಣಗಳಲ್ಲಿ ನಗರ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಯೋಜನೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನ ತನ್ನದಾಗಿಸಿಕೊಂಡಿದೆ. ಪ್ರಸ್ತುತ, 12 ನಗರಗಳಲ್ಲಿ ಒಟ್ಟು 564 ಅನುಸೂಚಿಗಳಿಂದ 9,016 ಟ್ರಿಪ್ಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದ್ದು, ಪ್ರಯಾಣಿಕರ ಲೋಡ್ ಫ್ಯಾಕ್ಟರ್ ಶೇ.71ಕ್ಕೂ ಅಧಿಕವಾಗಿದೆ. ಅದೇ ರೀತಿ ಮುಂದೆ 8 ಪಟ್ಟಣಗಳಲ್ಲಿ ನಗರ ವ್ಯಾಪ್ತಿ ಬಸ್ ಸಾರಿಗೆ ವ್ಯವಸ್ಥೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಭಾರತದಲ್ಲಿಯೇ ಪ್ರಥಮವಾಗಿ ಇಂಟರ್‌ಸಿಟಿ ಏರ್‌ಪೋರ್ಟ್ ಬಸ್ಸಿನ ಸೇವೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನಿಂದ ಮೈಸೂರಿಗೆ ಹಾಗೂ ಮಣಿಪಾಲ್ ಮಾರ್ಗವಾಗಿ ಕುಂದಾಪುರಕ್ಕೆ ಕಲ್ಪಿಸಲಾಗಿದೆ. ಇದು ಸಂಚಾರ ವ್ಯವಸ್ಥೆಯನ್ನು, ಉತ್ಕೃಷ್ಟ ಸೇವೆ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ನೂತನ ಪ್ರಯತ್ನವಾಗಿದೆ. ಇದೀಗ 6 ಫ್ಲೈ ಬಸ್ಸುಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯಾಚರಿಸಲಾಗುತ್ತಿದೆ. ಅದೇ ರೀತಿ ಸಿಬ್ಬಂದಿ ಡ್ಯೂಟಿ ರೋಟಾ ಮತ್ತು ರಜೆ ಕಿಯೋಸ್ಕ್ ವ್ಯವಸ್ಥೆ ಜಾರಿ ಬಗ್ಗೆಯೂ ಹೊಸದಿಲ್ಲಿ ಮೂಲದ ಇಂಡಿಯ ಹ್ಯಾಬಿಟಾಟ್ ಸೆಂಟರ್ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಹೊಸದಿಲ್ಲಿ ಮೂಲದ ಇಂಡಿಯ ಹ್ಯಾಬಿಟಾಟ್ ಸೆಂಟರ್ ಸ್ಕಾಚ್‌ನಲ್ಲಿ ಏರ್ಪಡಿಸಲಾಗಿದ್ದ ಶೃಂಗಸಭೆಯಲ್ಲಿ 41ನೆ ರಾಷ್ಟ್ರೀಯ ಸ್ಮಾರ್ಟ್ ಗವರ್ನೆನ್ಸ್ ಪ್ರಶಸ್ತಿಯನ್ನು ಕೆಎಸ್ಸಾರ್ಟಿಸಿಗೆ ಪ್ರದಾನಿಸಿದೆ.

Write A Comment