ಕರ್ನಾಟಕ

ಜನಾರ್ದನ ರೆಡ್ಡಿ ನಿವಾಸಕ್ಕೆ ಲೋಕಾ ದಾಳಿ: ಶಾಸಕರಾದ ಸುರೇಶ್‌ಬಾಬು, ನಾಗೇಂದ್ರ ಮನೆಗಳಿಗೂ ದಾಳಿ, ದಾಖಲೆಗಳ ವಶ

Pinterest LinkedIn Tumblr

Reddy______ಬಳ್ಳಾರಿ, ಸೆ.23: ಬೇಲೆಕೇರಿ ಕಬ್ಬಿಣದ ಅದಿರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಲೋಕಾಯುಕ್ತದ ವಿಶೇಷ ತನಿಖಾ ತಂಡವು ಬುಧವಾರ ಮಾಜಿ ಸಚಿವ ಹಾಗೂ ಗಣಿಧಣಿ ಜಿ. ಜನಾರ್ದನ ರೆಡ್ಡಿ ಹಾಗೂ ಇಬ್ಬರು ಶಾಸಕರು ಸೇರಿದಂತೆ ಎಂಟು ಮಂ♦ ಶಾಸಕರಾದ ಸುರೇಶ್‌ಬಾಬು, ನಾಗೇಂದ್ರ ಮನೆಗಳಿಗೂ ದಾಳಿ, ದಾಖಲೆಗಳ ವಶ
ಬಳ್ಳಾರಿ, ಸೆ.23: ಬೇಲೆಕೇರಿ ಕಬ್ಬಿಣದ ಅದಿರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಲೋಕಾಯುಕ್ತದ ವಿಶೇಷ ತನಿಖಾ ತಂಡವು ಬುಧವಾರ ಮಾಜಿ ಸಚಿವ ಹಾಗೂ ಗಣಿಧಣಿ ಜಿ. ಜನಾರ್ದನ ರೆಡ್ಡಿ ಹಾಗೂ ಇಬ್ಬರು ಶಾಸಕರು ಸೇರಿದಂತೆ ಎಂಟು ಮಂದಿಯ ನಿವಾಸಗಳ ಮೇಲೆ ದಾಳಿ ನಡೆಸಿದೆ.ದಿಯ ನಿವಾಸಗಳ ಮೇಲೆ ದಾಳಿ ನಡೆಸಿದೆ.
ಶೈಲೇಂದ್ರಕುಮಾರ್ ನೇತೃತ್ವದ ಆರು ಸದಸ್ಯರ ವಿಶೇಷ ತನಿಖಾ ತಂಡವು ಈ ದಾಳಿಯನ್ನು ನಡೆಸಿದೆ. ಜನಾರ್ದನ ರೆಡ್ಡಿ ಅಲ್ಲದೆ ಶಾಸಕರಾದ ಸುರೇಶ್ ಬಾಬು (ಬಿಜೆಪಿ) ಹಾಗೂ ಬಿ. ನಾಗೇಂದ್ರ (ಪಕ್ಷೇತರ) ಹಾಗೂ ಜನಾರ್ದನ ರೆಡ್ಡಿಯ ನಿಕಟವರ್ತಿ ಸ್ವಸ್ತಿಕ್ ನಾಗರಾಜ್ ನಿವಾಸಗಳ ಮೇಲೂ ವಿಶೇಷ ತನಿಖಾ ತಂಡವು ದಾಳಿ ನಡೆಸಿರುವುದಾಗಿ ಲೋಕಾಯುಕ್ತ ಮೂಲಗಳು ತಿಳಿಸಿವೆ.
ಕಂಪ್ಲಿ, ಬಳ್ಳಾರಿ ಹಾಗೂ ಹೊಸಪೇಟೆಗಳಲ್ಲಿ ದಾಳಿಗಳನ್ನು ನಡೆಸಲಾಯಿತೆಂದು ಅವು ಹೇಳಿವೆ. ವಿಶೇಷ ತನಿಖಾ ತಂಡವು ಬೇಲೆಕೇರಿಯಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ತಂಡವು ಇದೀಗ ಈ ದಾಖಲೆಗಳನ್ನು ಕೂಲಂಕಶವಾಗಿ ಪರಿಶೀಲಿಸುತ್ತಿರುವುದಾಗಿ ಲೋಕಾಯುಕ್ತದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾರವಾರ ಸಮೀಪದ ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರಿನ ಕಳ್ಳಸಾಗಣೆ ಪ್ರಕರಣವನ್ನು ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಬಯಲಿಗೆಳೆದಿದ್ದರು. 2006-2007 ಹಾಗೂ 2010-11ರಲ್ಲಿ 77.40 ಲಕ್ಷ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿದ್ದು, ಸರಕಾರದ ಬೊಕ್ಕಸಕ್ಕೆ ಭಾರೀ ನಷ್ಟವುಂಟಾಗಿತ್ತು.

Write A Comment