ಅಹ್ಮದಾಬಾದ್, ಸೆ.23: ಮಂಗಳವಾರ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದ ಗುಜರಾತ್‌ನ ಪಟೇಲ್ ಮೀಸಲಾತಿ ಆಂದೋಲ ನದ ನಾಯಕ ಹಾರ್ದಿಕ್ ಪಟೇಲ್ ಬುಧವಾರ ಮತ್ತೆ ಪ್ರತ್ಯಕ್ಷರಾಗಿದ್ದಾರೆ.
ಗುಜರಾತ್‌ನ ಸುರೇಂದ್ರ ನಗರ ಜಿಲ್ಲೆಯ ಧರಣ್‌ಗಾಧ್ರಾ ಪಟ್ಟಣದಲ್ಲಿ ಹಾದುಹೋಗುವ ಹೆದ್ದಾರಿಯಲ್ಲಿ ಅವರು ಕಂಡುಬಂದಿದ್ದಾರೆ. ಶಸ್ತ್ರಸಜ್ಜಿತರಾಗಿದ್ದ ವ್ಯಕ್ತಿಗಳು ತನ್ನನ್ನು ಅಪಹರಣ ಮಾಡಿದ್ದರೆಂದು ಅವರು ಹೇಳಿಕೊಂಡಿದ್ದಾರೆ.
ಬುಧವಾರ ಮಧ್ಯಾಹ್ನದ ಹೊತ್ತಿಗೆ ಹಾರ್ದಿಕ್ ಪಟೇಲ್ ತಮಗೆ ದೂರವಾಣಿ ಕರೆ ಮಾಡಿ ಹೆದ್ದಾರಿಯಲ್ಲಿ ತಾನು ಇರುವುದಾಗಿ ತಿಳಿಸಿದ್ದರೆಂದು ಪಟೇಲ್ ಸಮುದಾಯದ ನಾಯಕರು ತಿಳಿಸಿದ್ದಾರೆ. ‘ಬಯದ್ ಬಳಿ (ಅರಾವಳಿ ಜಿಲ್ಲೆ) ಕೆಲವರು ನನ್ನ ಕಾರನ್ನು ಬೆನ್ನಟ್ಟಿದರು. ತದನಂತರ ಕೆಲವು ವ್ಯಕ್ತಿಗಳು ನನ್ನನ್ನು ಕರೆದೊಯ್ದರು. ಇಡೀ ರಾತ್ರಿ ಕಾರಿನಲ್ಲೇ ಕುಳಿತು ಕಾಲಹರಣ ಮಾಡಬೇಕಾಯಿತು’ ಎಂದು ಹಾರ್ದಿಕ್ ಪಟೇಲ್ ವರದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
್ರಾಣ ಬೆದರಿೆ:ಈ ಚಳವಳಿಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ನಿಮ್ಮನ್ನು ಮುಗಿಸಲಾಗುವುದು ಎಂದು ನನಗೆ ಬೆದರಿಕೆ ಹಾಕಲಾಗಿತ್ತು. ಇದು ಮೊದಲ ಹಾಗೂ ಕೊನೆಯ ಎಚ್ಚರಿಕೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಇನ್ನು ಮುಂದೆ ಯಾವುದೇ ಹಳ್ಳಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು ಕಂಡುಬಂದಲ್ಲಿ ನಿಮ್ಮನ್ನು ಮುಗಿಸಲಾಗುವುದು ಎಂಬ ಬೆದರಿಕೆಯನ್ನು ಹಾಕಲಾಗಿದೆ ಎಂದು ಅವರು ಹೇಳಿದರು.
ರಾತ್ರಿಯಿಡೀ ನನ್ನನ್ನು ಬೆದರಿಸಲಾಗಿತ್ತು. ಬಯದ್‌ನಿಂದ ನನ್ನನ್ನು ಕರೆದೊಯ್ದು ಸುರೇಂದ್ರನಗರ ಜಿಲ್ಲೆಯ ಧರಣ್‌ಗಾಧ್ರಾ ತಾಲೂಕಿನ ಗ್ರಾಮವೊಂದರಲ್ಲಿ ಬಿಟ್ಟು ಹೋದರು ಎಂದು ಹಾರ್ದಿಕ್ ತಿಳಿಸಿದರು.
ಈ ವ್ಯಕ್ತಿ ಯಾರು, ಪೊಲೀಸನೇ ಅಥವಾ ಬೇರೆ ವ್ಯಕ್ತಿಯೇ ಎಂಬುದು ನನಗೆ ಗೊತ್ತಿಲ್ಲ. ಆತನ ಬಳಿ ರಿವಾಲ್ವರ್ ಇತ್ತು ಎಂದು ಹಾರ್ದಿಕ್ ತಿಳಿಸಿದರು.
ಆತ ಯಾರು ಎಂಬುದು ನನಗೆ ಗೊತ್ತಾಗಬೇಕು. ಯಾರ ಪರವಾಗಿ ಆತ ನನ್ನನ್ನು ರಾತ್ರಿಯಿಡೀ ಇರಿಸಿಕೊಂಡಿದ್ದಾನೆ ಎಂಬುದು ತಿಳಿಯಬೇಕು ಎಂದು ಅವರು ಹೇಳಿದರು.
ಹಾರ್ದಿಕ್ ಪಟೇಲ್ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಒಂದು ವೇಳೆ ಅವರು ಪತ್ತೆಯಾದಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಗಾಂಧಿನಗರ ವಲಯದ ಐಜಿ ಹಸ್ಮುಖ್ ಪಟೇಲ್ ಹೇಳಿದ್ದಾರೆ.
ರಾಷ್ಟ್ರೀಯ