ಕರ್ನಾಟಕ

ವಿಕಲಚೇತನರಿಗೆ ಆಯವ್ಯಯದಲ್ಲಿ ದುಪ್ಪಟ್ಟು ಅನುದಾನ: ಉನ್ನತ ಶಿಕ್ಷಣಕ್ಕೆ ಟಾಕಿಂಗ್ ಲ್ಯಾಪ್‌ಟಾಪ್; ಸಿಎಂ

Pinterest LinkedIn Tumblr

sidduಬೆಂಗಳೂರು, ಸೆ.18: ರಾಜ್ಯದಲ್ಲಿನ ವಿಕಲಚೇತನರ ಅಭಿವೃದ್ಧಿಗೆ ಸರಕಾರವು ಅನುದಾನವನ್ನು ದ್ವಿಗುಣಗೊಳಿಸಿದ್ದು, ಮೂರು ವರ್ಷದ ಹಿಂದೆ 628 ಕೋಟಿ ರೂ. ಅನುದಾನವನ್ನು ಈ ಸಾಲಿನಲ್ಲಿ 940 ಕೋಟಿ ರೂ. ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಬಗ್ಗೆ-2011ರ ಜನಗಣತಿ ಅನ್ವಯ ರಾಜ್ಯದಲ್ಲಿ 13,24,205 ಅಂಗವಿಕಲರಿದ್ದು, ಇವರಲ್ಲಿ ಸುಮಾರು 2,71,982 ದೈಹಿಕ ಅಂಗವಿಕಲರಿದ್ದಾರೆ ಎಂದರು.
ರಾಜ್ಯದಲ್ಲಿ ವಿಕಲಚೇತನರಿಗೆ ಮಾನಸಿಕ, ದೈಹಿಕವಾಗಿ ಶಕ್ತಿ ತುಂಬುವ ಕಾರ್ಯ ರಾಜ್ಯ ಸರಕಾರ ಕೈಗೊಂಡಿದ್ದು, ಪ್ರೌಢಶಾಲಾ ವಿದ್ಯಾಭ್ಯಾಸ ನಂತರ ಪ್ರತಿಭಾವಂತ ವಿಕಲಚೇತನರು ಉನ್ನತ ಶಿಕ್ಷಣ ಮುಂದುವರಿಸಲು ಅನುಕೂಲವಾಗುವಂತೆ ಟಾಕಿಂಗ್ ಲ್ಯಾಪ್‌ಟಾಪ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ವಿಕಲಚೇತನರ ಸಾಲಮನ್ನಾ ಮಾಡಲಾಗುತ್ತಿದ್ದು, ವಿಕಲಚೇತನರಿಗೆ ಸಹಾಯವಾಣಿ, ಪ್ರೋತ್ಸಾಹ ಧನ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗಿದೆ. ಶ್ರವಣ ದೋಷವುಳ್ಳ ವಿಕಲ ಚೇತನರಿಗೆ ಉಪಗ್ರಹ ಆಧಾರಿತ ಶಿಕ್ಷಣ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.
ಬೆಂ.ನಗರ ಜಿಲ್ಲೆಯಲ್ಲಿನ 50 ದೈಹಿಕ ಅಂಗವಿಕಲರಿಗೆ ಯಂತ್ರಚಾಲಿತ ತ್ರಿ-ಚಕ್ರ ವಾಹನಗಳನ್ನು ವಿತರಿಸಲು ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ನಗರ ಜಿಲ್ಲೆಯ 50 ದೈಹಿಕ ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ತ್ರಿಚಕ್ರವಾಹನ ಗಳನ್ನು ವಿತರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲಸೌಕರ್ಯ ಅಭಿವೃದ್ಧಿ, ವಾರ್ತಾ ಹಾಗೂ ಹಜ್ ಸಚಿವ ಆರ್.ರೋಷನ್ ಬೇಗ್ ವಹಿಸಿದ್ದರು. ವಿಕಲಚೇತನ-ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಉಮಾಶ್ರೀ, ಅಂಗವಿಕಲ ಕಲ್ಯಾಣ ಇಲಾಖೆ ಆಯುಕ್ತ ರಾಜಣ್ಣ, ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಉಪಸ್ಥಿತರಿದ್ದರು.

Write A Comment