ಕರ್ನಾಟಕ

ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಮೋದಾದೇವಿ ಒಡೆಯರ್, ಯದುವೀರ್

Pinterest LinkedIn Tumblr

odeyar

ನಂಜನಗೂಡು , ಸೆ.15: ದಕ್ಷಿಣ ಕಾಶಿ ಪವಿತ್ರ ಪುಣ್ಯ ಕ್ಷೇತ್ರವೆನಿಸಿರುವ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಮತ್ತು ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮೊದಲಿಗೆ ಗಣಪತಿ ಪೂಜೆ ಸಲ್ಲಿಸಿ, ಪಾರ್ವತಿ ಅಮ್ಮನವರಿಗೆ ಕುಂಕುಮಾರ್ಚನೆ ಸೇವೆ ಸಲ್ಲಿಸಿದ ನಂತರ ಶ್ರೀಕಂಠೇಶ್ವರ ಸ್ವಾಮಿಯವರಿಗೆ ಏಕವಾರ ರುದ್ರಾಭಿಷೇಕ ಸೇವೆ ಸಲ್ಲಿಸಿದರು. ಕಪಿಲ ನದಿ ತೀರದಲ್ಲಿರುವ ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇದಕ್ಕೂ ಮೊದಲು ದೇವಸ್ಥಾನಕ್ಕೆ ಬಂದ ರಾಜಮನೆತನದವರನ್ನು ದೇವಸ್ಥಾನದ ನಿರ್ವಹಣಾ ಅಧಿಕಾರಿ ಜಯಪ್ರಕಾಶ್, ಎ.ಇ.ಒ. ಗಂಗಯ್ಯ, ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಮೋಹನ್ ಹಾಗೂ ಸದಸ್ಯರುಗಳು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್ ರವರು ರಾಜ್ಯದಲ್ಲಿ ಬರಗಾಲ ಹೋಗಿ ಉತ್ತಮ ಮಳೆ-ಬೆಳೆಯಾಗಿ ಉತ್ತಮ ಬದುಕು ಸಾಗಿಸಲಿ ಎಂದು ಶ್ರೀಕಂಠೇಶ್ವರ ಸ್ವಾಮಿಯವರಲ್ಲಿ ಅರಿಕೆ ಮಾಡಿದ್ದಾಗಿ ತಿಳಿಸಿದರು.

Write A Comment