ಕರ್ನಾಟಕ

ಕೇರಳೀಯರ ಅರ್ಪಣಾ ಮನೋಭಾವ ಶ್ಲಾಘನೀಯ;ಸಚಿವ ಕೆ.ಜೆ.ಜಾರ್ಜ್

Pinterest LinkedIn Tumblr

george_8ಬೆಂಗಳೂರು, ಸೆ.13: ಆರೋಗ್ಯ, ಶಿಕ್ಷಣ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಕೇರಳಿಗರ ಅರ್ಪಣಾ ಹಾಗೂ ಸೇವಾ ಮನೋಭಾವ ಶ್ಲಾಘನೀಯ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ರವಿವಾರ ನಗರದ ಜಯಚಾಮರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೇರಳ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ 100ಕ್ಕೂ ಹೆಚ್ಚು ಮಲಯಾಳಿಗರ ಸಂಘ ಸಂಸ್ಥೆಗಳಿವೆ. ಇವುಗಳಿಗೆ ಕೇರಳ ಸಮಾಜವೇ ಮಾತೃ ಸಂಸ್ಥೆ ಎಂದು ಅಭಿಪ್ರಾಯಪಟ್ಟರು.

ಕೇರಳ ಸಮಾಜದ ಸಹಯೋಗದಲ್ಲಿ ಉಚಿತ ಡಯಾಲಿಸಿಸ್ ಕೇಂದ್ರ ತೆರೆದಿ ರುವುದರಿಂದ ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗಿದೆ. ಇಂತಹ ಸಮಾಜ ಸೇವಾ ಕಾರ್ಯಗಳನ್ನು ಮತ್ತಷ್ಟು ನಡೆಸಲಿ ಎಂದು ಅವರು ಹಾರೈಸಿದರು.

ಕೇರಳ ಸಂಸ್ಕತಿ ಅತ್ಯಂತ ಶ್ರೀಮಂತವಾದದ್ದು, ಪ್ರತಿಯೊಬ್ಬರೂ ತಮ್ಮ ಸಂಸ್ಕೃತಿ, ಪರಂಪರೆಯನ್ನು ಬೆಳೆಸಬೇಕು. ಅದರ ಜೊತೆಗೆ ತಾವು ನೆಲೆಸಿರುವ ದೇಶ ಹಾಗೂ ರಾಜ್ಯದ ಸಂಸ್ಕೃತಿಗೂ ಗೌರವ ನೀಡ ಬೇಕು. ರಾಜ್ಯ ದಲ್ಲಿ ನೆಲೆಸಿರುವ ಕೇರಳಿಗರು ಕನ್ನಡ ಭಾಷೆಯನ್ನು ಕಲಿತು ಇಲ್ಲಿನ ಜನರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಅವರು ಕರೆ ನೀಡಿದರು.
ನಗರದಲ್ಲಿನ ಸಂಚಾರ ದಟ್ಟಣೆ ಸಮಸ್ಯೆಯನ್ನು ಬಗೆಹರಿಸಲು ಸರಕಾರ ಈಗಾಗಲೇ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅಂಡರ್‌ಪಾಸ್, ಮೇಲ್ಸೇತುವೆ, ಎಲಿವೇಟೆಡ್ ಹೈವೆಗಳ ನಿರ್ಮಾ ಣಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಆದಷ್ಟು ಶೀಘ್ರದಲ್ಲೇ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ಜಾರ್ಜ್ ತಿಳಿಸಿದರು.

ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ಆದರೂ, ಕೆಲವರು ಅನಗತ್ಯ ವಾಗಿ ಪೊಲೀಸರ ವಿರುದ್ಧ ಟೀಕೆಗಳನ್ನು ಮಾಡುತ್ತಿರುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೇರಳ ಸಮಾಜದ ಪದಾಧಿಕಾರಿ ಗಳಾದ ಶೋಭನಾಥ ಚೌರಿ, ವಿಜಯ್‌ಕುಮಾರ್, ರಾಜಗೋಪಾಲ್, ಮೋಹನ್, ಅನಿಲ್‌ಕುಮಾರ್, ಜಾರ್ಜ್ ಥಾಮಸ್ ಮತ್ತಿತರರು ಉಪಸ್ಥಿತರಿದ್ದರು.

Write A Comment