ಕರ್ನಾಟಕ

ಬುಲ್ಸ್ ಗೆ ರಾಕ್‌ಸ್ಟಾರ್ಸ್‌ ವಿರುದ್ಧ ಭರ್ಜರಿ ಜಯ

Pinterest LinkedIn Tumblr

crick_ಮೈಸೂರು, ಸೆ.13: ಬಿಜಾಪುರ ಬುಲ್ಸ್ ತಂಡ ಇಲ್ಲಿ ನಡೆದ ಕೆಪಿಎಲ್ ಟ್ವೆಂಟಿ-20 ಟೂರ್ನಿಯ 19ನೆ ಪಂದ್ಯದಲ್ಲಿ ರಾಕ್‌ಸ್ಟಾರ್ಸ್‌ ವಿರುದ್ಧ 97 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಇದರೊಂದಿಗೆ ಬಿಜಾಪುರ ಬುಲ್ಸ್ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶ ದೃಢಪಡಿಸಿದೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 198 ರನ್‌ಗಳ ಕಠಿಣ ಸವಾಲನ್ನು ಪಡೆದ ರಾಕ್‌ಸ್ಟಾರ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 100 ರನ್ ಗಳಿಸಲಷ್ಟೇ ಶಕ್ತವಾಯಿತು.
ಬಿಜಾಪುರ ಬುಲ್ಸ್‌ನ ಕಾರ್ಯಪ್ಪ(2-8), ಕೆಪಿ ಅಪ್ಪಣ್ಣ(2-18), ಸುನೀಲ್ ರಾಜು(2-20), ಆದಿತ್ಯ ಸೋಮಣ್ಣ(1-29), ಅಭಿಮನ್ಯು ಮಿಥುನ್(1-8), ದೀಪಕ್ ಚೌಗುಲೆ(1-14) ದಾಳಿಗೆ ಸಿಲುಕಿದ ರಾಕ್‌ಸ್ಟಾರ್ಸ್‌ನ ದಾಂಡಿಗರು ರನ್ ಗಳಿಸಲು ಪರದಾಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ ವಿಕೆಟ್ ಕೈಚೆಲ್ಲಿದರು.
ಆರಂಭಿಕ ದಾಂಡಿಗ ರಾಜು ಗೌಡ(26) , ಚರಣ್ ತೇಜಾ (24) ಮತ್ತು ಚಂದ್ರಶೇಖರ ರಘು(13) ಹೊರತುಪಡಿಸಿದರೆ ತಂಡದ ಸಹ ಆಟಗಾರರಿಂದ ಎರಡಂಕೆಯ ಸ್ಕೋರ್ ಬರಲಿಲ್ಲ.
ನಿದೀಶ್, ಅಖಿಲ್ ಅರ್ಧಶತಕ: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಿಜಾಪುರ ಬುಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 197 ರನ್ ಗಳಿಸಿತ್ತು.
ಆರಂಭಿಕ ದಾಂಡಿಗ ನಿದೀಶ್ ಮತ್ತು ನಾಯಕ ಬಾಲಚಂದ್ರ ಅಖಿಲ್ ಅರ್ಧಶತಕಗಳ ಕೊಡುಗೆ ಬಿಜಾಪುರ ಬುಲ್ಸ್ ತಂಡಕ್ಕೆ ದೊಡ್ಡ ಮೊತ್ತದ ಸವಾಲನ್ನು ಸೇರಿಸಲು ನೆರವಾಯಿತು.
ಆರಂಭಿಕ ದಾಂಡಿಗ ರವಿಕುಮಾರ್ ಸಮರ್ಥ್ (17) ಮತ್ತು ನಿದೀಶ್ ಮೊದಲ ವಿಕೆಟ್‌ಗೆ 6.6 ಓವರ್‌ಗಳಲ್ಲಿ 46 ರನ್ ಸೇರಿಸಿದರು. ಸಮರ್ಥ್ ಅವರು ರಘು ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಎರಡನೆ ವಿಕೆಟ್‌ಗೆ ನಿದೇಶ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಜೊತೆಯಾಗಿ ಸ್ಕೋರ್‌ನ್ನು ಶತಕದ ಗಡಿ ದಾಟಿಸಿದರು. 14.2 ಓವರ್‌ನಲ್ಲಿ ಉತ್ತಪ್ಪ ಅವರಿಗೆ ರಘು ಪೆವಿಲಿಯನ್ ಹಾದಿ ತೋರಿಸಿದರು. 14.2ನೆ ಓವರ್‌ನಲ್ಲಿ ಉತ್ತಪ್ಪ (24) ಅವರು ರಘು ಎಸೆತದಲ್ಲಿ ನಿತೀಶ್‌ಗೆ ಕ್ಯಾಚ್ ನೀಡಿದರು.
ಉತ್ತಪ್ಪ ಔಟಾದ ಬೆನ್ನೆಲ್ಲೇ ನಿದೇಶ್ ಚಂದ್ರಶೇಖರ್ ರಘುಗೆ ವಿಕೆಟ್ ಒಪ್ಪಿಸಿದರು. ನಿದೇಶ್ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 57 ರನ್ ಗಳಿಸಿದರು. ರಾಜು ಭಟ್ಕಳ (1) ಅವರನ್ನು ಸುನೀಲ್ ಜೋಶಿ ಎಲ್‌ಬಿಡಬ್ಲು ಬಲೆಗೆ ಬೀಳಿಸಿದಾಗ ಬಿಜಾಪುರ ತಂಡದ ಸ್ಕೋರ್ 15.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 106 ರನ್.
ಐದನೆ ವಿಕೆಟ್‌ಗೆ ಸುನೀಲ್ ರಾಜು (20) ಮತ್ತು ಬಾಲಚಂದ್ರ ಅಖಿಲ್ 67 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಆಧರಿಸಿದರು. ನಾಯಕ ಬಾಲಚಂದ್ರ ಅಖಿಲ್ ಔಟಾಗದೆ 69 ರನ್(22ಎ, 6ಬೌ,6ಸಿ) ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Write A Comment