ಕರ್ನಾಟಕ

ಕಲಬುರ್ಗಿ ಹಂತಕರ ರೇಖಾಚಿತ್ರ ಬಿಡುಗಡೆ

Pinterest LinkedIn Tumblr

kalaburgiಬೆಂಗಳೂರು, ಸೆ.2: ಹುಬ್ಬಳ್ಳಿ-ಧಾರವಾಡ ಪೊಲೀಸರು ಬುಧವಾರ ತಡರಾತ್ರಿ ಪ್ರೊ.ಎಂ.ಎಂ.ಕಲಬುರ್ಗಿಯವರ ಶಂಕಿತ ಹಂತಕರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೊಲೀಸರ ಫೇಸ್‌ಬುಕ್ ಪುಟದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಕಲಬುರ್ಗಿ
ಕುಟುಂಬದ ಸದಸ್ಯರು ಹಾಗೂ ಓರ್ವ ಪ್ರತ್ಯಕ್ಷದರ್ಶಿ ನೀಡಿರುವ ಮಾಹಿತಿಗಳನ್ನು ಆಧರಿಸಿ ಈ ಚಿತ್ರಗಳನ್ನು ರಚಿಸಲಾಗಿದೆ. ರೇಖಾಚಿತ್ರದೊಂದಿಗೆ ಸಾಮ್ಯತೆ ಹೊಂದಿರುವ ವ್ಯಕ್ತಿಯೊಬ್ಬನ ಚಲನವಲನಗಳ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆಂದು ಹುಬ್ಬಳ್ಳಿಯ ಹಿರಿಯ ಪೊಲೀಸ್ ಮೂಲವೊಂದು ತಿಳಿಸಿದೆ.

ಪ್ರೊ.ಕಲಬುರ್ಗಿಯವರ ನಿವಾಸದ ಸಮೀಪದಲ್ಲೇ ಇರುವ ಕಾಲೇಜೊಂದರ ಹೊರಗೆ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಯ ನೆರವಿನಿಂದಾಗಿ ನಮಗೆ ಬಹಳ ಅತ್ಯುತ್ತಮವಾದ ಮಾಹಿತಿ ಲಭಿಸಿವೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಮೂಲವೊಂದು ತಿಳಿಸಿದೆ.

ಪ್ರೊ.ಕಲಬುರ್ಗಿ ಹತ್ಯೆಯಾದ ಕೆಲವೇ ಸೆಕೆಂಡುಗಳಲ್ಲಿ ಇಬ್ಬರು ವ್ಯಕ್ತಿಗಳು ಬಜಾಜ್ ಡಿಸ್ಕವರ್ ಬೈಕಿನಲ್ಲಿ ಕಾಲೇಜಿನ ಮುಂದೆ ಹಾದು ಹೋಗಿದ್ದಾರೆ. ಅವರೇ ಹಂತಕರೆಂದು ನಂಬಲು ನಮಗೆ ಪ್ರಬಲವಾದ ಕಾರಣಗಳು ಲಭಿಸಿವೆ ಎಂದು ಈ ಮೂಲಗಳು ಹೇಳಿವೆ.

Write A Comment