ಕರ್ನಾಟಕ

ಕುಮಾರಸ್ವಾಮಿ ಪಾದಯಾತ್ರೆಗೆ ವ್ಯಾಪಕ ಬೆಂಬಲ

Pinterest LinkedIn Tumblr

kumarswamy-1ಧಾರವಾಡ, ಜೂ.28- ರೈತನ ಆತ್ಮಹತ್ಯೆ, ಕಬ್ಬು ಬೆಳೆಗಾರರ ಸಮಸ್ಯೆ ವಿಷಯ ಮುಂದಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಧಾರವಾಡದಿಂದ ಹಮ್ಮಿಕೊಂಡಿರುವ ಪಾದಯಾತ್ರೆಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ಇಂದು ಹಿರೇಬಾಗೇವಾಡಿಗೆ ಭೇಟಿ ನೀಡಿ ರೈತರ ಬೃಹತ್ ಸಮವೇಶ ನಡೆಸಿದರು.

ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲಿನ ಜನರು ಕುಮಾರಸ್ವಾಮಿಯನ್ನು ಬೆಂಬಲಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮನೆ ಮನೆಗಳಿಗೆ ಕರೆದುಕೊಂಡು ಹೋಗಿ ಸನ್ಮಾನ ಕೂಡ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಅಶೋಕ್ ಪೂಜಾರಿ ಸೇರಿದಂತೆ ಇನ್ನಿತರ ಜೆಡಿಎಸ್ ನಾಯಕರು ಕುಮಾರಸ್ವಾಮಿಗೆ ಸಾಥ್ ನೀಡಿದ್ದಾರೆ. ಅವರ ರ್ಯಾ ಲಿ  ಇಂದು ಎಂ.ಕೆ. ಹುಬ್ಬಳ್ಳಿ ಬಿಟ್ಟು ಹಿರೇಬಾಗೇವಾಡಿಗೆ ಬಂದು ತಲುಪಿತು. ಅಷ್ಟೇ ಅಲ್ಲ ಆತ್ಮಹತ್ಯೆ ಮಾಡಿಕೊಂಡ ಬಡ ಅಂಕಲಗಿ ಗ್ರಾಮದ ರೈತನ ಮನೆಗೂ ಕೂಡ ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದರು. ಮತ್ತೆ ನಾಳೆ ಕುಮಾರಸ್ವಾಮಿಯವರು ಹಿರೇಬಾಗೇವಾಡಿಯಿಂದ ಸುವರ್ಣ ವಿಧಾನಸೌಧ ತಲುಪಿದರು. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯವರು ಸರಿಯಾದ ಸಮಯಕ್ಕೆ ಬಿಲ್ಲು ಕೊಡಲಿಲ್ಲ ಎಂಬ ಕಾರಣವೊಡ್ಡಿ ಬಡಾಲ ಅಂಕಲಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದನು. ಹೀಗಾಗಿ ಬಿಜೆಪಿಯವರು ಈ ರೈತನ ಮನೆಯಿಂದಲೇ ಸುವರ್ಣ ವಿಧಾಸೌಧದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಕೆ.ಎಸ್.ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಜಿಲ್ಲೆಯ ಬಿಜೆಪಿ ನಾಯಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಈಗಿನ ಮಾಹಿತಿ ಪ್ರಕಾರ, ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆಂದು ಮೂಲಗಳು ಹೇಳಿವೆ. ಕಳಚಿದ ಪ್ಯಾಂಟು: ಸಹಜವಾಗಿ ತಮ್ಮ ನಾಯಕರು ಆಗಮಿಸಿದಾಗ ಅವರಿಗೆ ಸನ್ಮಾನ ಮಾಡಬೇಕು. ನಂತರ ಅವರೊಂದಿಗೆ ಪೋಟೊ ಕ್ಲಿಕ್ಕಿಸಿಕೊಳ್ಳಬೇಕು ಎನ್ನುವ ತವಕ ಇರುವುದು ಸಹಜ. ಆದರೆ, ಇಂತಹ ಹುಮ್ಮಸ್ಸಿನಲ್ಲಿ ಒಬ್ಬರು ತಮ್ಮ ಪ್ಯಾಂಟ್ ಗಟ್ಟಿಯಾಗಿದೆಯೋ ಇಲ್ಲವೋ ಎನ್ನುವುದನ್ನು ಸಹ ನೋಡಲಿಲ್ಲ. ಇದರಿಂದ ಏನಾಯಿತು ಎಂದರೆ ಕುಮಾರಸ್ವಾಮಿಗೆ ಹೂವಿನ ಹಾಕುವಾಗ ಕೈ ಮೇಲೆ ಮಾಡಿದಾಗ ಅವರ ಪ್ಯಾಂಟು ಥಟ್ಟನೆ ಕಳಚಿತು. ಸುದೈವವರೆಂದರೆ ಈ ಸನ್ಮಾನ ಬಹಿರಂಗ ವೇದಿಕೆಯಲ್ಲಿ ಆಗಿರಲಿಲ್ಲ. ಮನೆಯಲ್ಲಿ ನಡೆಯುತ್ತಿತ್ತು. ಹೀಗಾಗಿ ಅಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರಿದ್ದರು.

Write A Comment