ಕರ್ನಾಟಕ

ಬ್ರಾಂಡೆಡ್ ಕಂಪನಿಗಳ ಹೆಸರಿನಲ್ಲಿ ನಕಲಿ ಮೊಬೈಲ್ ಮಾರಾಟ

Pinterest LinkedIn Tumblr

5418samsung_galaxy_grand_cover_081831325896

ಮೈಸೂರು: ಬ್ರಾಂಡೆಡ್ ಕಂಪನಿಗಳ ಹೆಸರಿನಲ್ಲಿ ನಕಲಿ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದ್ದ ಖದೀಮನನ್ನು ಮೈಸೂರಿನ ಲಷ್ಕರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ 39 ವರ್ಷದ ನಾಥೂರಾಮ್ ಎಂದು ಹೇಳಲಾಗಿದ್ದು, ಮಹದೇವ್ ಟೆಲಿಕಾಂ ಸರ್ವೀಸ್ ಎಂಬ ಮೊಬೈಲ್ ಮಾರಾಟದ ಅಂಗಡಿಯನ್ನು ಹೊಂದಿದ್ದ ಈತ ನಕಲಿ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದ್ದನೆನ್ನಲಾಗಿದೆ.

ಈತನಿಂದ ವಂಚನೆಗೊಳಗಾದ ಸನತ್ ಕುಮಾರ್ ಎಂಬವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಈತನ ಬಂಧನವಾಗಿದ್ದು, ಈ ವೇಳೆ ಸೆಲ್ ಕಾಮ್ ಕಂಪನಿ ಹೆಸರಿನಲ್ಲಿ ತಯಾರಿಸಲಾಗಿದ್ದ 11 ನಕಲಿ ಮೊಬೈಲುಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಬೆಂಗಳೂರಿನಿಂದ ತಾನು 100 ನಕಲಿ ಮೊಬೈಲ್ ಗಳನ್ನು ಮಾರಾಟಕ್ಕಾಗಿ ತಂದಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

Write A Comment