ಮನೋರಂಜನೆ

ಮಾನಸಿಕ ಒತ್ತಡಕ್ಕೆ ಈ ನಟಿಯಲ್ಲಿದೆಯಂತೆ ಮದ್ದು !

Pinterest LinkedIn Tumblr

2595kashmira-shah3hhhಹಲವರು ತಮ್ಮ ಕೆಲಸದ ಒತ್ತಡದಿಂದ ಪಾರಾಗಲು ಧ್ಯಾನ, ವ್ಯಾಯಾಮ, ಯೋಗ, ಸಿನಿಮಾ ವೀಕ್ಷಣೆ, ಸಂಗೀತ ಕೇಳುವುದು ಹೀಗೆ ತರಹೇವಾರಿ ಹವ್ಯಾಸವನ್ನು ರೂಡಿಸಿಕೊಳ್ಳುತ್ತಾರೆ. ಆದರೆ ಹಿಂದಿ ಮತ್ತು ಮರಾಠಿ ಚಿತ್ರಗಳ ಬೆಡಗಿ ಕಶ್ಮೀರ ಶಾ ತಮ್ಮ ಹವ್ಯಾಸದ ಕುರಿತು ಮಾತನಾಡುವ ಮೂಲಕ ಹುಬ್ಬೇರುವಂತೆ ಮಾಡಿದ್ದಾಳೆ.

ಹೌದು. ಕಶ್ಮೀರ ಶಾ ತಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂದು ಹೊಸ ಉತ್ಸಾಹದಲ್ಲಿರಲು ಹೊಸ ಮಾರ್ಗವನ್ನು ಕಂಡುಕೊಂಡು ಅಚ್ಚರಿ ಮೂಡಿಸಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಶಾ, ನನ್ನ ಶೂಟಿಂಗ್ ಶೆಡ್ಯೂಲ್ ನ ಒತ್ತಡದಿಂದಾಗಿ ನಾನು ತುಂಬಾ ಸುಸ್ತಾಗಿರುತ್ತೇನೆ. ಇಂತಹ ಸಂದರ್ಭದಲ್ಲಿ ಸೆಕ್ಸ್ ನಲ್ಲಿ ಭಾಗವಹಿಸುವ ಮೂಲಕ ಮರು ಉತ್ಸಾಹ ಪಡೆಯುತ್ತೇನೆ ಎಂದಿದ್ದಾರೆ.

ಅಷ್ಟೇ ಅಲ್ಲ, ಸೆಕ್ಸ್ ನಲ್ಲಿ ನೀವು ಸಂತೃಪ್ತಿ ಕಾಣದಿದ್ದ ಪಕ್ಷದಲ್ಲಿ ಎಲ್ಲಿಯೂ ಸಂತಸ ಕಾಣಲು ಸಾಧ್ಯವಿಲ್ಲ ಎಂದಿರುವ ಶಾ, ತಮ್ಮ ಮಾನಸಿಕ ಒತ್ತಡ ನಿವಾರಣೆಗೆ ಸಹಾಯಕವಾಗಿರುವುದು ಪ್ರಣಯ ಮಾತ್ರ ಎಂದು ತಿಳಿಸಿದ್ದಾರೆ.

ನನ್ನ ಗೆಳೆಯನ ಜೊತೆ ಹಾಸಿಗೆ ಮೇಲೆ ಪ್ರಣಯದಲ್ಲಿ ತೊಡಗುವ ಮೂಲಕ ನನ್ನ ಮಾನಸಿಕ ಒತ್ತಡವನ್ನ ಕಡಿಮೆ ಮಾಡಿಕೊಳ್ಳುತ್ತಿದ್ದು ಮರುದಿನ ಎಂದಿನಂತೆ ನನ್ನ ಕೆಲಸಗಳಲ್ಲಿ ಉತ್ಸಾಹದಲ್ಲಿ ಭಾಗವಹಿಸುತ್ತೇನೆ. ಹಾಗಾಗಿ ಇದುವೇ ನನ್ನ ಜೀವನದಲ್ಲಿ ಪ್ಲಸ್ ಪಾಯಿಂಟ್ ಆಗಿದೆ ಎಂದೂ ತಿಳಿಸಿದ್ದಾರೆ.

Write A Comment