ಮನೋರಂಜನೆ

ಡಬ್ಲುಡಬ್ಲುಇ ಪ್ರಿಯರಿಗೊಂದು ಸಂತಸದ ಸುದ್ದಿ !

Pinterest LinkedIn Tumblr

11430 (1)

ಮುಂಬೈ: ಭಾರತದ ಡಬ್ಲುಡಬ್ಲುಇ ಪ್ರಿಯರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ಖಲಿ ಬಳಿಕ ಈಗ ಮತ್ತೆ ಇಬ್ಬರು ಭಾರತೀಯರು ಡಬ್ಲುಡಬ್ಲುಇ ಸೇರಿಕೊಂಡಿದ್ದಾರೆ. ಈ ವಿಷಯವನ್ನು ಡಬ್ಲುಡಬ್ಲುಇ ಉಪಾಧ್ಯಕ್ಷ ಪೌಲ್ ಖಚಿತಪಡಿಸಿದ್ದಾರೆ.

ವಿಶ್ವ ಕಬಡ್ಡಿ ಲೀಗ್ ಚಾಂಪಿಯನ್ ಮಾಜಿ ಅಟಗಾರ ಲವ್ಪ್ರೀತ್ ಸಿಂಗ್ ಮತ್ತು ಎರಡು ಬಾರಿ ರಾಷ್ಟ್ರೀಯ ಕುಸ್ತಿ ಹೆವಿ ವೇಯ್ಟ್ ಚಾಂಪಿಯನ್ ಆಗಿದ್ದ ಸತ್ಯೇಂದ್ರ ವೇದ್ ಪಾಲ್ ಈಗ ಡಬ್ಲುಡಬ್ಲುಇ ತಂಡಕ್ಕೆ ಸೇರ್ಪಡೆಗೊಂಡಿದ್ದು, ಪ್ರೇಕ್ಷಕರನ್ನು ಸೆಳೆಯಲಿದ್ದಾರೆ.

27 ವರ್ಷದ ಲವ್ಪ್ರೀತ್ ಸಿಂಗ್ ತಾವು ‘ದಿ ರಾಕ್’ ಜಾನ್ಸನ್ ಅವರಿಂದ ಸ್ಪೂರ್ತಿ ಪಡೆದುಕೊಂಡಿರುವುದಾಗಿ ಹೇಳಿಕೊಂಡಿದ್ದರೆ, 34 ವರ್ಷದ 105 ಕೆ.ಜಿ. ತೂಕ ಹೊಂದಿರುವ ಸತ್ಯೇಂದ್ರ ವೇದ್ ಪಾಲ್ ‘ಅಂಡರ್ ಟೇಕರ್’ ತಮಗೆ ಸ್ಪೂರ್ತಿ ಎಂದಿದ್ದಾರೆ. ದೃಢಕಾಯ ಮೈಕಟ್ಟೇ ಡಬ್ಲುಡಬ್ಲುಇ ಸೇರಲು ಅರ್ಹತೆಯಾಗಿದ್ದು, ಇದರಲ್ಲಿ ಉತ್ತೀರ್ಣರಾಗುವ ಮೂಲಕ ಭಾರತದ ಇವರಿಬ್ಬರು ಈಗ ಡಬ್ಲುಡಬ್ಲುಇ ಭಾಗವಾಗಲಿದ್ದಾರೆ. ಭಾರತದ ಖಲಿ ಈಗಾಗಲೇ ಡಬ್ಲುಡಬ್ಲುಇ ನಲ್ಲಿದ್ದು, ಬಾಲಿವುಡ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

Write A Comment