ಕರ್ನಾಟಕ

ಕಾವೇರಿ ಜಲಾನಯನ ಭಾಗದ ಜಲಾಶಯಗಳ ಒಳಹರಿವು ಹೆಚ್ಚಳ

Pinterest LinkedIn Tumblr

Kabini-dam--in-Kar

ಮಡಕೇರಿ, ಜೂ.22- ಕೇರಳದ ವೈನಾಡು, ಕೊಡಗು ಮತ್ತು ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾವೇರಿ ಜಲಾನಯನ ಭಾಗದ ಜಲಾಶಯಗಳಲ್ಲಿನ ಒಳಹರಿವು ಹೆಚ್ಚಳವಾಗಿದೆ. ಹೇಮಾವತಿ, ಕಬಿನಿ, ಹಾರಂಗಿ ಹಾಗೂ ಕೆಆರ್‌ಎಸ್‌ನಲ್ಲಿ ಒಳ ಹರಿವು ಹೆಚ್ಚಾಗಿದೆ.

ಈ ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆ ಯಾಗುತ್ತಿದ್ದು, ಅಪಾಯ ಮಟ್ಟ ತಲುಪುವ ಆತಂಕ ಸ್ಥಳೀಯರಲ್ಲಿ ಉಂಟಾಗಿದೆ.   ಕಾವೇರಿ ಉಗಮ ಸ್ಥಾನ ಭಾಗ ಮಂಡಲ ಜಲಾವೃತಗೊಂಡಿದ್ದು, ನದಿಪಾತ್ರದಲ್ಲಿ ಜನರಿಗೆ ಮುನ್ನೆ ಚ್ಚರಿಕೆ ಸಂದೇಶ ನೀಡಲಾಗಿದೆ. ಎಚ್‌ಡಿ ಕೋಟೆ ತಾಲೂಕಿನ ಹಾರಂಗಿ ಜಲಾಶಯಕ್ಕೆ 13 ಸಾವಿರ ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, ಅಣೆಕಟ್ಟಿನ ನೀರಿನ ಶೇಖರಣೆ 2269 ಅಡಿಗೆ ಮುಟ್ಟಿದೆ.

ಕೆಆರ್‌ಎಸ್ ಜಲಾಶಯಕ್ಕೂ ಕೂಡ ಸಾವಿರಾರು ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ.  80 ಅಡಿವರೆಗೂ ನೀರಿನ ಮಟ್ಟ ಏರಿಕೆಯಾಗಿದೆ. ಅದೇ ರೀತಿ ಕಬಿನಿ ಹಾಗೂ ಹೇಮಾವತಿ ಜಲಾಶಯಕ್ಕೂ ಒಳಹರಿವು ಪ್ರಮಾಣ ಗಣನೀಯವಾಗಿ ಏರುತ್ತಲೇ ಬಂದಿದೆ. ಕಳೆದ ಶನಿವಾರ ಒಂದರಿಂದ ಎರಡು ಸಾವಿರ ಕ್ಯೂಸೆಕ್ಸ್‌ನಷ್ಟಿದ್ದ ಜಲಾಶಯಗಳ ಒಳಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಾವೇರಿ ಜಲಾನಯನ ಭಾಗವಾದ ಕೊಡಗು, ಕೇರಳದ ವೈನಾಡು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವುದ ರಿಂದ ಜಲಾಶಯಗಳಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ತುಂಗಾ ಜಲಾಶಯ ಭರ್ತಿ ಯಾಗಿದ್ದು, ಸುಮಾರು ಎಂಟು ಕ್ರಿಸ್‌ಗೇಟ್‌ಗಳ ಮೂಲಕ 80 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ ಮತ್ತು ಒಂದು ಲಕ್ಷ ಕ್ಯೂಸೆಕ್ಸ್‌ಗೂ ಹೆಚ್ಚು ನೀರು ಜಲಾಶಯಕ್ಕೆ ಹರಿದುಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಮಳೆ ಸ್ವಲ್ಪ ಮಟ್ಟಿಗೆ ತಗ್ಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಹೊರ ಬಿಡುವ ಕಾರ್ಯ ನಿಲ್ಲಿಸಲಾಗಿದೆ.

Write A Comment