ಕರ್ನಾಟಕ

ಯೋಗ ಸೋಮಾರಿಗಳಿಗೆ; ನಾವು ಸೋಮಾರಿಗಳಾ?: ಆಂಜನೇಯಗೆ ದೇಶಪಾಂಡೆ ಪ್ರಶ್ನೆ

Pinterest LinkedIn Tumblr

rv

ಬೆಂಗಳೂರು: ಯಾರು ದೇಹದಂಡಿಸಿ ಕೆಲಸ ಮಾಡುತ್ತಾರೋ ಅವರಿಗೆ ಯಾವುದೇ ರೋಗ ಬರುವುದಿಲ್ಲ. ಸೋಮಾರಿಗಳು ಮಾತ್ರ ಯೋಗ ಮಾಡುತ್ತಾರೆ ಎಂದಿದ್ದ ಸಮಾಜಕಲ್ಯಾಣ ಸಚಿವ ಆಂಜನೇಯ ಅವರ ಹೇಳಿಕೆಗೆ, ಅವರದೇ ಸರ್ಕಾರದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ತಿರುಗೇಟು ನೀಡಿದ್ದು, ಹಾಗಾದ್ರೆ ನಾವು ಸೋಮಾರಿಗಳಾ ಎಂದು ಪ್ರಶ್ನಿಸಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಂಬಂಧಿಸಿದಂತೆ ನಿನ್ನೆ ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಆಂಜನೇಯ, ಐಷಾರಾಮಿಗಳಿಗೆ ಬದುಕಲು ಯೋಗ ಬೇಕು. ಶ್ರಮಿಕರಿಗೆ ಬೇಡ. ನಾನು ದಿನ ವಾಕಿಂಗ್ ಮಾಡುತ್ತೇನೆ, ಕೆಲವೇ ಆಸನ ಮಾಡುತ್ತೇನೆ. ಮಕ್ಕಳು ಸದಾ ಆಟೋಟದಲ್ಲಿ ತೊಡಗಿಸಿಕೊಳ್ಳಬೇಕು. ಆಗ ಯಾವುದೇ ರೋಗ ಬರುವುದಿಲ್ಲ. ಹಿಂದಿನ ಕಾಲದಲ್ಲಿ ದೇಹಕ್ಕೆ ವ್ಯಾಯಾಮ ನೀಡುತ್ತಿದ್ದ ಅನೇಕ ಆಟಗಳು ಇಂದಿಲ್ಲ ಎಂದಿದ್ದರು.

ಇಂದು ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ದೇಶಪಾಂಡೆ, ನಾನು ಸಹ ದಿನ ಯೋಗ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರು ಯೋಗ ಮಾಡುತ್ತಾರೆ. ಹಾಗಾದರೆ ನಾವೆಲ್ಲಾ ಸೋಮಾರಿಗಳಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಆಂಜನೇಯ ಹೇಳಿಕೆ ಬಗ್ಗೆ  ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದೇಶಪಾಂಡೆ, ಅವರ ಹೇಳಿಕೆ ದುರದೃಷ್ಟಕರ ಎಂದಿದ್ದಾರೆ.

Write A Comment