ಕರ್ನಾಟಕ

ಹಳಿ ತಪ್ಪಿದ ಬೆಂಗಳೂರು-ಚೆನ್ನೈ ರೈಲು

Pinterest LinkedIn Tumblr

bang-chennai train

ಚೆನ್ನೈ, ಜೂ.17: ಬೆಂಗಳೂರು-ಚೆನ್ನೈ ನಡುವೆ ಸಂಚರಿಸುವ ಚೆನ್ನೈ ನಗರ ಮೂಲದ ಪ್ರಯಾಣಿಕರಿದ್ದ ರೈಲಿನ 2 ಬೋಗಿಗಳು ಇಂದಿಲ್ಲಿ ಹಳಿ ತಪ್ಪಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಇಲ್ಲಿನ ಕೇಂದ್ರ ರೈಲ್ವೆ ನಿಲ್ದಾಣ ಸಮೀಪದ ಬಾಸಿನ್ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೀವಹಾನಿಯಾಗಿಲ್ಲ. ಆದರೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು ಪ್ರಯಾಣಿಕರಿಗೆ ತೊಂದರೆಯಾಗಿದೆ. ತೆರವು ಕಾರ್ಯಾಚರಣೆ ನಡೆದಿದೆ.

Write A Comment