ಕರ್ನಾಟಕ

‘ಭಿಕ್ಷುಕರಿಗೆ ಯಾವುದೇ ಆಯ್ಕೆ ಇಲ್ಲ’; ನಿರ್ಮಾಪಕರ ಧರಣಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಅಂಬರೀಶ್

Pinterest LinkedIn Tumblr

ambi

ಬೆಂಗಳೂರು: ಸ್ಯಾಂಡಲ್‌ವುಡ್ ಚಿತ್ರರಂಗದ ನಿರ್ಮಾಪಕರು ಧರಣಿ ನಡೆಸುತ್ತಿದ್ದು, ಈ ಸಂಬಂಧ ಮಾತನಾಡಿದ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಅವರು ಬೆಗ್ಗರ್ಸ್ ಹ್ಯಾವ್ ನೋ ಚಾಯ್ಸ್(ಬಿಕ್ಷುಕರಿಗೆ ಯಾವುದೇ ಆಯ್ಕೆ ಇಲ್ಲ) ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಲಾವಿದರ ಸಂಘದಿಂದ ನಮ್ಮ ಸಮಸ್ಯೆಗಳಿಗೆ ಸೂಕ್ತ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಆರೋಪಿಸಿ ಸ್ಯಾಂಡಲ್‌ವುಡ್ ಚಿತ್ರರಂಗದ ನಿರ್ಮಾಪಕರು ಕಳೆದ ಹದಿನೇಳು ದಿನಗಳಿಂದ ಧರಣಿ ಕುಳಿತಿದ್ದು, ಅಂಬರೀಶ್ ಅವರ ಈ ಹೇಳಿಕೆ ನಿರ್ಮಾಪಕರು ಸಹನೆ ಕೆಡುವಂತೆ ಮಾಡಿದೆ.

ತಮ್ಮ ಬಳಿಗೆ ಚರ್ಚಿಸಲು ಬಂದಿದ್ದ ನಿರ್ಮಾಪಕರಾದ ಮುನಿರತ್ನ ಹಾಗೂ ಕೆ.ಮಂಜು ಚರ್ಚಿಸಿದ ಬಳಿಕ ಮಾತನಾಡಿದ ಅಂಬರೀಶ್, ನನ್ನ ಕೆಲಸಕ್ಕಾಗಿ ಬಂದಿದ್ದಲ್ಲ. ಈಗ ನನ್ನ ವೃತ್ತಿಯೂ ಅದಲ್ಲ, ನಾನು ಬಂದಿದ್ದು ಚಿತ್ರರಂಗಕ್ಕೋಸ್ಕರ, ಈಗ ಸಮಸ್ಯೆ ಇರುವರು ಯಾರು? ಸಮಸ್ಯೆ ಇರುವರು ಅಲ್ಲಿ ಕೂಡಾಗುತ್ತಿದ್ದಾರೆ. ಹಿಂದೆ ಬಿಕ್ಷುಕರಿಗೆ 1 ರುಪಾಯಿ ಕೊಟ್ರೆ ಸುಮ್ಮನೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಆಗಿಲ್ಲ, 10 ರುಪಾಯಿ ಕೊಡಬೇಕು. ಬೆಗ್ಗರ್ಸ್ ಹ್ಯಾವ್ ನೋ ಚಾಯ್ಸ್, ಬೆಗ್ಗರ್ಸ್ ಆರ್ ನಾಟ್ ಚೂಚರ್ಸ್ ಎಂದು ವ್ಯಂಗ್ಯವಾಡಿದ್ದಾರೆ.

ಕಲಾವಿದರ್ಯಾರು ನಿರ್ಮಾಪಕರ ಬಳಿಗೆ ಹೋಗುವುದಿಲ್ಲ ನಿರ್ಮಾಪಕರೇ ಕಲಾವಿದರ ಬಳಿ ಬರುತ್ತಾರೆ. ಸಮಸ್ಯೆಗಳಿರುವ ಜನ ಈಗ ಪ್ರತಿಭಟನೆ ನಡೆಸುತ್ತಿದ್ದಾರೆ ಅವರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವತ್ತ ಯೋಚಿಸಬೇಕು ಎಂದು ನಿರ್ಮಾಪಕರ ವಿರುದ್ಧ ಕಿಡಿಕಾರಿದ್ದಾರೆ.

Write A Comment