ಕರ್ನಾಟಕ

ನೈಟಿ ಧರಿಸಿ ತಿರುಗುತ್ತಿದ್ದವನು ಕೊನೆಗೂ ಪೊಲೀಸರ ಬಲೆಗೆ

Pinterest LinkedIn Tumblr

1452ladies-maxi-250x250

ರಾಣೆಬೆನ್ನೂರು: ಹೆಣ್ಣು ಮಕ್ಕಳ ನೈಟಿ ಧರಿಸಿ ರಾತ್ರಿ ವೇಳೆ ಅಡ್ಡಾಡುತ್ತಾ ಜನತೆಯಲ್ಲಿ ಭೀತಿ ಹುಟ್ಟಿಸಿದ್ದ ಸೈಕೋನನ್ನು ಬಂಧಿಸುವಲ್ಲಿ ರಾಣೆಬೆನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ವ್ಯಕ್ತಿ ಸಮೀವುಲ್ಲಾ ಮೂಲತಃ ಹಿರೇಕೆರೂರು ತಾಲೂಕಿನ ಗ್ರಾಮವೊಂದರ ನಿವಾಸಿ ಎನ್ನಲಾಗಿದ್ದು, ಮಾನಸಿಕ ಅಸ್ವಸ್ಥನಾಗಿದ್ದ ಈತ ರಾತ್ರಿ ವೇಳೆ ರಾಣೆಬೆನ್ನೂರಿನ ಕೆಲ ಮನೆಗಳಿಂದ ಮಹಿಳೆಯರ ನೈಟಿ ಕದ್ದು ಅದನ್ನು ಧರಿಸಿಕೊಂಡು ಬೀದಿಗಳಲ್ಲಿ ತಿರುಗುತ್ತಿದ್ದ. ತನ್ನನ್ನು ಯಾರಾದರು ಹಿಡಿಯಲು ಬಂದ ವೇಳೆ ಸ್ಮಶಾನಕ್ಕೆ ಓಡಿ ಹೋಗುತ್ತಿದ್ದು ಸಾರ್ವಜನಿಕರ ಜೊತೆ ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿದ್ದ.

ಕೊನೆಗೂ ಈತನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ರಾಣೆಬೆನ್ನೂರು ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನೈಟಿ ಧರಿಸಿಕೊಂಡು ಸಮೀವುಲ್ಲಾ ನಿಶಾಚರಿಯಂತೆ ತಿರುಗುತ್ತಿದ್ದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಈತನ ಪತ್ತೆಗಾಗಿ ಬಲೆ ಬೀಸಿದ್ದರು.

Write A Comment