ರಾಷ್ಟ್ರೀಯ

ಉಗ್ರರ ಧ್ವಜ ಹಾರಾಟಕ್ಕೆ ಗಿಲಾನಿ ಹೇಳಿದ್ದೇನು ಗೊತ್ತೇ ..?

Pinterest LinkedIn Tumblr

6752geelani

ಹುರಿಯತ್‌ ಕಾನ್ಫರೆನ್ಸ್‌ ರ್ಯಾಲಿಯಲ್ಲಿ ಇಸಿಸ್ ಉಗ್ರ ಸಂಘಟನೆಯ ಧ್ವಜಗಳನ್ನು ಹಾರಿಸಿದ್ದಕ್ಕೆ ಪ್ರತ್ಯೇಕತಾವಾದಿ ನಾಯಕ ಸಯ್ಯದ್‌ ಅಲಿಶಾ ಗಿಲಾನಿ ಕಿಡಿಕಾರಿದ್ದಾರೆ.

ಜೂನ್ 14 ರ ಭಾರತ ವಿರೋಧಿ ಸಮಾವೇಶ ನಡೆಸಿದ ಹಿನ್ನೆಲೆಯಲ್ಲಿ ಗೃಹಬಂಧನದಲ್ಲಿರುವ  ಗಿಲಾನಿ, ಇಸಿಸ್  ಧ್ವಜ ಹಾರಾಟವು ಪ್ರತ್ಯೇಕತಾವಾದಿಗಳ ನೀತಿಯ ವಿರುದ್ಧವಾಗಿದ್ದು ಇಂತಹ ಕೆಲಸದಿಂದ, ಮೊದಲೇ ನಮ್ಮ ವಿರುದ್ಧ ಕತ್ತಿ ಮಸೆಯುತ್ತಿರುವ ಭಾರತಕ್ಕೆ ಮತ್ತಷ್ಟು ಅಸ್ತ್ರಗಳನ್ನು ಕೊಟ್ಟಂತಾಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇಸಿಸ್ ಧ್ವಜ  ಹಾರಾಟ ನಡೆಸಿರುವುದು ತಪ್ಪು ಎಂದಿರುವ ಗಿಲಾನಿ ಇದರಿಂದ ನಮ್ಮ ನೈಜ ಸ್ವಾತಂತ್ರ್ಯ ಹೋರಾಟಕ್ಕೆ ಧಕ್ಕೆ ಬರುತ್ತದೆ ಎಂದು ತಿಳಿಸಿದ್ದಾರೆ.

Write A Comment