ಅಂತರಾಷ್ಟ್ರೀಯ

ಹತ್ಯೆ ಮಾಡುವ ಮುನ್ನ ಆತನಿಂದಲೇ ಗುಂಡಿ ತೆಗೆಸಿದ್ದ ಉಗ್ರರು

Pinterest LinkedIn Tumblr

1542safe_image.php_3

ಸಿರಿಯಾ: ಐಸಿಸ್ ಭಯೋತ್ಪಾದಕರ ಕ್ರೂರತೆಗೆ ಕೊನೆಯೇ ಇಲ್ಲದಂತಾಗಿದೆ. ಗೂಢಚಾರನೆಂದು ಶಂಕಿಸಲ್ಪಟ್ಟಿದ್ದ ವ್ಯಕ್ತಿಯನ್ನು ಕೊಲೆ ಮಾಡುವ ಮುನ್ನ ಆತನಿಂದಲೇ ಗುಂಡಿ ತೆಗೆಸಿ ಬಳಿಕ ಅದರಲ್ಲೇ ಆತನನ್ನು ಮಣ್ಣು ಮಾಡಿದ್ದಾರೆ.

ಮೊಸಾದ್ ಪರ ಗೂಢಚಾರಿಕೆ ಮಾಡುತ್ತಿದ್ದಾನೆಂಬ ಶಂಕೆಯ ಮೇಲೆ ಈಜಿಪ್ಟ್ ಮೂಲದ ವ್ಯಕ್ತಿಯನ್ನು ಸೆರೆ ಹಿಡಿದಿರುವ ಉಗ್ರರು ಆತನಿಗೆ ಚಿತ್ರ ಹಿಂಸೆ ನೀಡಿದ್ದಾರೆ. ಬಳಿಕ ಬಯಲೊಂದರಲ್ಲಿ ಆತನ ಮೂಲಕವೇ ಗುಂಡಿ ತೆಗೆಸಿದ್ದಾರೆ.

ಆತನ ತಲೆಗೆ ಗುಂಡಿಟ್ಟು ಹತ್ಯೆ ಮಾಡಿರುವ ಉಗ್ರರು ರಣ ಕೇಕೆ ಹಾಕಿ ಆತ ತೋಡಿದ್ದ ಗುಂಡಿಯಲ್ಲೇ ಆತನನ್ನು ಮಣ್ಣು ಮಾಡಿದ್ದಾರೆ. ಇದೆಲ್ಲ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿರುವ ಉಗ್ರರು ಇದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕುವ ಮೂಲಕ ತಮ್ಮ ಪೈಶಾಚಿಕತೆಯನ್ನು ವಿಶ್ವಕ್ಕೆ ಪರಿಚಯಿಸುವ ಯತ್ನ ಮಾಡಿದ್ದಾರೆ.

Write A Comment