ಅಂತರಾಷ್ಟ್ರೀಯ

4,300 ನಿರಾಶ್ರಿತರಿಗೆ ‘ಶಾಶ್ವತ ನೆಲೆ’ ಕಲ್ಪಿಸಿದ ಕೇಂದ್ರ ಸರ್ಕಾರ

Pinterest LinkedIn Tumblr

ni

ಕಿರುಕುಳಕ್ಕೊಳಗಾದ ಹಿಂದೂಗಳಿಗೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ಪಾಕಿಸ್ತಾನ ಮತ್ತು ಅಘ್ಘಾನಿಸ್ತಾನದ ಸುಮಾರು 4,300 ನಿರಾಶ್ರಿತ ಹಿಂದೂ ಹಾಗೂ ಸಿಖ್ ನಾಗರಿಕರಿಗೆ ಭಾರತದ ನಾಗರಿಕತ್ವ ನೀಡುವ ಮೂಲಕ ಮಾನವೀಯತೆ ಪ್ರದರ್ಶಿಸಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಸುಮಾರು 2 ಲಕ್ಷ ಹಿಂದು, ಸಿಖ್ ನಿರಾಶ್ರಿತರು ಪ್ರಸ್ತುತ ಭಾರತದಲ್ಲಿ ವಾಸಿಸುತ್ತಿದ್ದು ಅವರಿಗೆ ಸಾಮಾಜಿಕ ಭದ್ರತೆ ನೀಡುವ ದೃಷ್ಟಿಯಿಂದ ಪ್ರಾಥಮಿಕವಾಗಿ ದೇಶದ ನಾಗರಿಕತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದು, ಕಿರುಕುಳಕ್ಕೊಳಗಾದ ಹಿಂದೂಗಳಿಗೆ ಭಾರತ ಆಶ್ರಯ ನೀಡಲಿದೆ ಎಂಬ ಬಿಜೆಪಿ ನೀತಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶೇಷವೆಂದರೆ ಯುಪಿಎ-II ಅವಧಿಯಲ್ಲಿ ಕೇವಲ 1023 ಮಂದಿಗೆ ಮಾತ್ರ ನಾಗರಿಕತ್ವ ನೀಡಿತ್ತು. ಆದರೆ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನಿ, ಬಾಂಗ್ಲಾದೇಶದ ನಿರಾಶ್ರಿತ ಹಿಂದುಗಳನ್ನು ಇತರೆ ಭಾರತೀಯ ಪ್ರಜೆಯಂತೆಯೇ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದನ್ನಿಲ್ಲಿ ಸ್ಮರಿಸಬಹುದು.

Write A Comment