ಕರ್ನಾಟಕ

ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಮದುವೆಯಾದವನು ಮಾಡಿದ್ದೇನು ..?

Pinterest LinkedIn Tumblr

7775528902-rape

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ವ್ಯಕ್ತಿಯೊಬ್ಬ ಆಕೆಯನ್ನೇ ಮದುವೆಯೂ ಆಗಿ ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮುದ್ದೇಬಿಹಾಳ ತಾಲೂಕಿನ ಕೊರವಾರ ಗ್ರಾಮದ 22 ವರ್ಷದ ಸುನೀಲ್ ಭದ್ರಗೊಂಡ ಎಂಬಾತ ಅದೇ ಗ್ರಾಮದ 13 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ನಿರಂತರ ಒಂದು ತಿಂಗಳ ಕಾಲ ಅತ್ಯಾಚಾರ ಎಸಗಿದ್ದು ಮರ್ಯಾದೆಗೆ ಅಂಜಿದ ಸುನೀಲ್​​ ಪೋಷಕರು, ಇವರಿಬ್ಬರಿಗೂ ಮದುವೆ ಮಾಡಿದ್ದಾರೆ.

ಆದರೆ ಇದೀಗ ಆಕೆಗೆ ಮಕ್ಕಳಾಗುತ್ತಿಲ್ಲವೆಂದು ಸುನೀಲ್​ ನಿತ್ಯ ಕುಡಿದು ಬಂದು, ಬಾಲಕಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾನೆ ಎನ್ನಲಾಗಿದ್ದು  ಕಳೆದೊಂದು ತಿಂಗಳಿಂದ 13 ವರ್ಷದ ಬಾಲಕಿಯನ್ನು ವಿಜಯಪುರದ ಲಾಡ್ಜ್’​ನಲ್ಲಿಟ್ಟಿದ್ದ ಎನ್ನಲಾಗಿದೆ. ಆದರೆ ಬಾಲಕಿ ಹೇಗೋ ತಪ್ಪಿಸಿಕೊಂಡು ಬಂದಿದ್ದು ತನ್ನ ಗ್ರಾಮದ ಸಲ್ಮಾ ಎಂಬಾಕೆಗೆ ಸಿಕ್ಕಿದ್ದಾಳೆ. ಈ ವಿಷಯ ತಿಳಿದ ಕಾಮುಕ ಸುನೀಲ್ ಕಷ್ಟದಲ್ಲಿರುವ ಬಾಲಕಿಗೆ ಆಶ್ರಯ ನೀಡಿದ್ದ ಸಲ್ಮಾ ಮತ್ತಾಕೆಯ ಪತಿಯನ್ನು ಆರೋಪಿ ಸುನೀಲ್​ ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ್ದಾನೆ.

ಈಗಾಗಲೇ ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುನೀಲ್​ ಸೇರಿದಂತೆ ನಾಲ್ವರು ಸ್ನೇಹಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment